ಟಿ20 ಇತಿಹಾಸದಲ್ಲೇ ಮೊದಲು: ಓವರ್‌ನ 7ನೇ ಎಸೆತದಲ್ಲಿ ಔಟಾದ ನತದೃಷ್ಟ ಬ್ಯಾಟ್ಸ್‌ಮನ್!

ಮೈದಾನದ ಅಂಪೈರ್ ಮಾಡಿದ ಎಡವಟ್ಟಿನಿಂದಾಗಿ ಓವರ್ ನ 7ನೇ ಎಸೆತದಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿರುವ ಘಟನೆ ಆಸ್ಟ್ರೇಲಿಯಾದ ಟಿ20 ಬಿಗ್ ಬ್ಯಾಶ್ ಲೀಗ್ ನಲ್ಲಿ ನಡೆದಿದೆ.
ಮೈಕೆಲ್ ಕ್ಲಿಂಗೆರ್
ಮೈಕೆಲ್ ಕ್ಲಿಂಗೆರ್
ಪರ್ತ್: ಮೈದಾನದ ಅಂಪೈರ್ ಮಾಡಿದ ಎಡವಟ್ಟಿನಿಂದಾಗಿ ಓವರ್ ನ 7ನೇ ಎಸೆತದಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿರುವ ಘಟನೆ ಆಸ್ಟ್ರೇಲಿಯಾದ ಟಿ20 ಬಿಗ್ ಬ್ಯಾಶ್ ಲೀಗ್ ನಲ್ಲಿ ನಡೆದಿದೆ. 
ಹೌದು ಪರ್ತ್ ಸ್ಕೋಚರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರ್ತ್ ತಂಡದ ಆರಂಭಿಕ ಆಟಗಾರ ಮೈಕೆಲ್ ಕ್ಲಿಂಗೆರ್ 2 ರನ್ ಗಳಿಸಿ ಔಟ್ ಆಗಿದ್ದಾರೆ. ಇದು ಅಂಪೈರ್ ಮಾಡಿದ ಎಡವಟ್ಟಿನಿಂದ.
ಒಂದು ಓವರ್ ನಲ್ಲಿ 6 ಎಸೆತಗಳು ಮಾತ್ರ ಇರುತ್ತದೆ. ಆದರೆ ಅಂಪೈರ್ ಎಸೆತಗಳನ್ನು ಲೆಕ್ಕ ಹಾಕುವುದರಲ್ಲಿ ತಪ್ಪು ಮಾಡಿದ್ದರಿಂದ ಬೌಲರ್ 7ನೇ ಎಸೆತ ಮಾಡಬೇಕಾಯಿತು. ವಿಪರ್ಯಾಸ ಎಂದರೆ ಅದೇ ಎಸೆತದಲ್ಲಿ ಮೈಕೆಲ್ ಅವರು ಒ ಕೇಫೆ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 
ಒಟ್ಟಿನಲ್ಲಿ ಅಂಪೈರ್ ಆರು ಎಸೆತಗಳಿಗೆ ಸರಿಯಾಗಿ ಓವರ್ ಎಂದು ಹೇಳಿದ್ದರೆ. ಕ್ಲಿಂಗೆರ್ ಔಟಾಗುತ್ತಿರಲಿಲ್ಲ ಎಂಬ ಮಾತುಗಳು ವ್ಯಕ್ತವಾಗಿದೆ.
ಇನ್ನು ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ 5 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿದ್ದರು, 178 ರನ್ ಗಳ ಗುರಿ ಬೆನ್ನಟ್ಟಿದ ಪರ್ತ್ ತಂಡ 3 ವಿಕೆಟ್ ನಷ್ಟಕ್ಕೆ 18.5ನೇ ಓವರ್ ನಲ್ಲಿ 178 ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com