ಮೆಕ್ಕಲಂ ಮ್ಯಾಜಿಕಲ್ ಫೀಲ್ಡಿಂಗ್
ಕ್ರಿಕೆಟ್
ವಿಡಿಯೋ: ಮೆಕ್ಕಲಂ ಅದ್ಭುತ ಫೀಲ್ಡಿಂಗ್ ಗೆ ಅಂಪೈರ್ ಗಳೇ ದಂಗು..!
ಕ್ರಿಕೆಟ್ ನಲ್ಲಿ ಅದ್ಭುತ ಫೀಲ್ಡರ್ ಗಳಿಗೇನೂ ಕಡಿಮೆ ಇಲ್ಲ.. ಆದರೆ ಬಿಗ್ ಬ್ಯಾಶ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ಬ್ರೆಂಡನ್ ಮೆಕ್ಕಲ್ ರ ಒಂದು ಅದ್ಭುತ ಫೀಲ್ಡಿಂಗ್ ಅಂಪೈರ್ ಗಳನ್ನೇ ಚಕಿತಗೊಳಿಸಿದೆ.
ಸಿಡ್ನಿ: ಕ್ರಿಕೆಟ್ ನಲ್ಲಿ ಅದ್ಭುತ ಫೀಲ್ಡರ್ ಗಳಿಗೇನೂ ಕಡಿಮೆ ಇಲ್ಲ.. ಆದರೆ ಬಿಗ್ ಬ್ಯಾಶ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ಬ್ರೆಂಡನ್ ಮೆಕ್ಕಲ್ ರ ಒಂದು ಅದ್ಭುತ ಫೀಲ್ಡಿಂಗ್ ಅಂಪೈರ್ ಗಳನ್ನೇ ಚಕಿತಗೊಳಿಸಿದೆ.
ಹೌದು.. ಬಿಗ್ ಬ್ಯಾಶ್ 2019 ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಮೆಕ್ಕಲಂ ಬ್ರಿಸ್ಬೇನ್ ಹೀಟ್ ತಂಡದ ವಿರುದ್ಧದ ಪಂದ್ಯದಲ್ಲಿ ತಮ್ಮ ಅದ್ಭುತ ಫೀಲ್ಡಿಂಗ್ ಟ್ಯಾಲೆಂಟ್ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. ಪಂದ್ಯದ 16ನೇ ಓವರ್ ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಜೇಮ್ಸ್ ವಿನ್ಸ್ ಲಾಂಗ್ ಆನ್ ನತ್ತ ಸಿಕ್ಸರ್ ಗೆ ಚೆಂಡನ್ನು ಭಾರಿಸಿದರು. ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಮೆಕ್ಕಲಮ್ ಅದ್ಭುತವಾಗಿ ಗಾಳಿಯಲ್ಲಿ ಹಾರಿ ಚೆಂಡನ್ನು ತಳ್ಳಿದರು. ಆದರೆ ಚೆಂಡು ಮತ್ತೆ ಸಿಕ್ಸರ್ ಬೌಂಡರಿಯಲ್ಲೇ ಇದ್ದ ಕಾರಣ ಮತ್ತೆ ಗಾಳಿಯಲ್ಲಿ ಹಾರಿದ ಮೆಕ್ಕಲಮ್ ಚೆಂಡನ್ನು ತಳ್ಳಿದ್ದರು. ಆದರೆ ಮೆಕ್ಕಲಮ್ ಗಾಳಿಯಲ್ಲಿದ್ದಾಗ ಅವರು ಬೌಂಡರಿ ಗೆರೆ ಮೇಲೆ ಗಾಳಿಯಲ್ಲಿ ಇದ್ದರು. ಅವರ ದೇಹದ ಯಾವುದೇ ಅಂಗ ಕೂಡ ಬೌಂಡರಿ ಗೆರೆಗೆ ತಾಗಿರಲಿಲ್ಲ.
ಹೀಗಾಗಿ ಅಂಪೈರ್ ಗಳು ಸಿಕ್ಸರ್ ಇಲ್ಲ ಎಂದು ಪ್ರಕಟಿಸಿದರು. ಆದರೆ ಈ ನಿರ್ಣಯ ತೆಗೆದುಕೊಳ್ಳುವ ಮೊದಲು ಅಂಪೈರ್ ಗಳು ಸಾಕಷ್ಟು ಚರ್ಚೆ ನಡೆಸಿದ್ದರು. ಕ್ರಿಕೆಟ್ ನ ಬದಲಾದ ನಿಯಮಗಳನ್ನು ತಿರುವಿ ಹಾಕಿ ಚರ್ಚೆ ನಡೆಸಿದರು. ಅದರೆ ಅಂತಿಮವಾಗಿ ಮೆಕ್ಕಲಮ್ ಬೌಂಡರಿ ಗೆರೆ ಮೇಲೆ ಇದ್ದರೂ ಅವರು ಗಾಳಿಯಲ್ಲಿ ಇದ್ದುದರಿಂದ ಮತ್ತು ಚೆಂಡು ಅವರ ಕೈಗೆ ತಾಗಿರಲಿಲ್ಲವಾದ್ದರಿಂದ ಅಂಪೈರ್ ಗಳು ಸಿಕ್ಸರ್ ಆಗಿಲ್ಲ ಎಂದು ತೀರ್ಪು ನೀಡಿದರು.
ಒಟ್ಟಾರೆ ಈ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕಿದ್ದಂತೂ ನಿಜ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ