ಅಂಬಾಟಿ ರಾಯುಡು ನಿವೃತ್ತಿ, ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ: ಜಹೀರ್ ಖಾನ್

ನಿವೃತ್ತಿ ಕುರಿತಂತೆ ಅಂಬಾಟಿ ರಾಯುಡು ಕೈಗೊಂಡ ನಡೆ ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ ಎಂದು ಹಿರಿಯ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.
ಜಹೀರ್ ಖಾನ್ ಮತ್ತು ಅಂಬಾಟಿ ರಾಯುಡು
ಜಹೀರ್ ಖಾನ್ ಮತ್ತು ಅಂಬಾಟಿ ರಾಯುಡು
Updated on
ಲಂಡನ್: ನಿವೃತ್ತಿ ಕುರಿತಂತೆ ಅಂಬಾಟಿ ರಾಯುಡು ಕೈಗೊಂಡ ನಡೆ ಭಾವುಕ ನಿರ್ಧಾರವಲ್ಲ ಎಂದು ಭಾವಿಸಿದ್ದೇನೆ ಎಂದು ಹಿರಿಯ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.
ಖ್ಯಾತ ಕ್ರಿಕೆಟ್ ಜಾಲತಾಣ ಕ್ರಿಕ್ ಬಜ್ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಹೀರ್ ಖಾನ್, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಮಾತ್ರಕ್ಕೇ ಅಂಬಾಟಿ ರಾಯುಡು ಇಂತಹ ಕಠಿಣ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭಾವಿಸಿದ್ದೇನೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸಾಕಷ್ಟು ಯೋಚನೆ ಮಾಡಿಯೇ ಆಟಗಾರರನ್ನು ಆಯ್ಕೆ ಮಾಡುತ್ತದೆ. ಹೀಗಾಗಿ ವಿಶ್ವಕಪ್ ತಂಡಕ್ಕೆ ಅಂಬಾಟಿ ರಾಯುಡು ಸ್ಟ್ಯಾಂಡ್ ಬೈ ಪ್ಲೇಯರ್ ಆಗಿದ್ದರೂ, ವಿಜಯ್ ಶಂಕರ್, ಕೇದಾರ್ ಜಾದವ್, ಮಯಾಂಕ್ ಅಗರ್ವಾಲ್ ಆಯ್ಕೆಯಲ್ಲಿ ನನಗೆ ಯಾವುದೇ ರೀತಿಯ  ಅಚ್ಚರಿ ಕಾಣುತ್ತಿಲ್ಲ.
ತಂಡಕ್ಕೆ ಬೇಕಾದ ಆಯ್ಕೆಯನ್ನೇ ಆಯ್ಕೆ ಸಮಿತಿ ಮಾಡಿದೆ. ಆದರೆ ಅಂಬಾಟಿ ರಾಯುಡು ಕ್ರಿಕೆಟ್ ಅನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಅವರಿಗಿಂತ ಈ ವಿಜಯ್ ಶಂಕರ್, ಕೇದಾರ್ ಜಾದವ್, ಮಯಾಂಕ್ ಅಗರ್ವಾಲ್ ಆಯ್ಕೆ ಸಮಿತಿಗೆ ಉತ್ತಮವಾಗಿ ಕಂಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 40ಕ್ಕೂ ಹೆಚ್ಚು ಸರಾಸರಿ ಕಡಿಮೆ ಸಾಧನೆಯೇನಲ್ಲ ಎಂದು ಜಹೀರ್ ಖಾನ್ ಅಂಬಾಟಿ ಬೆನ್ನಿಗೆ ನಿಂತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com