ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತದಲ್ಲಿ ದೇಶೀ ಕ್ರಿಕೆಟ್ ಕಲರವ!

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಮುಕ್ತಾಯ ಬೆನ್ನಲ್ಲೇ ದೇಶೀ ಕ್ರಿಕೆಟ್ ಕಲರವ ಆರಂಭವಾಗಲಿದ್ದು, 2019-20ನೇ ಸಾಲಿನ ದೇಶಿ ಕ್ರಿಕೆಟ್‌ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಮುಕ್ತಾಯ ಬೆನ್ನಲ್ಲೇ ದೇಶೀ ಕ್ರಿಕೆಟ್ ಕಲರವ ಆರಂಭವಾಗಲಿದ್ದು, 2019-20ನೇ ಸಾಲಿನ ದೇಶಿ ಕ್ರಿಕೆಟ್‌ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಬಿಡುಗಡೆ ಮಾಡಿದೆ.
ಅದರಂತೆ ಆಗಸ್ಟ್ 17 ರಿಂದ ದುಲೀಪ್‌ ಟ್ರೋಫಿ, ಡಿಸೆಂಬರ್ 9 ರಿಂದ ರಣಜಿ ಟ್ರೋಫಿ ಆರಂಭವಾಗಲಿದೆ. ಮುಂದಿನ ತಿಂಗಳು ದುಲೀಪ್‌ ಟ್ರೋಫಿ ಕ್ರಿಕೆಟ್‌ ಕೂಟದೊಂದಿಗೆ ಕ್ರಿಕೆಟ್‌ ಋತು ಆರಂಭಗೊಳ್ಳಲಿದ್ದು, ಆ. 17-ಸೆ. 8ರ ದುಲೀಪ್ ಯನ್ನು ಆಯೋಜನೆ ಮಾಡಲಾಗಿದೆ.
ಇನ್ನು ಪ್ರತಿಷ್ಠಿತ ರಣಜಿ ಟ್ರೋಫಿ ಪಂದ್ಯಾವಳಿ ಡಿಸೆಂಬರ್‌-ಮಾರ್ಚ್‌ ತಿಂಗಳ ನಡುವೆ ಸಾಗಲಿದ್ದು, ಡಿಸೆಂಬರ್  9ರಿಂದ ಮಾರ್ಚ್ 13ರ ವರೆಗೂ ನಡೆಯಲಿದೆ. ಏಕದಿನ ಸರಣಿಯಾಗಿರುವ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿ ಸೆಪ್ಟೆಂಬರ್ 24ರಿಂದ ಅಕ್ಟೋಬಪ್ 25ರ ತನಕ ನಡೆಯಲಿದ್ದು, ದೇವಧರ್‌ ಟ್ರೋಫಿ ಸರಣಿ ಅಕ್ಟೋಬರ್ 31ರಿಂದ ನವೆಂಬರ್ 4ರ ತನಕ ನಡೆಯಲಿದೆ. ಅಂತೆಯೇ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿ ನವೆಂಬರ್ 8-ಡಿಸೆಂಬರ್ 1ರ ವರೆಗೂ ಮತ್ತು ಇರಾನಿ ಟ್ರೋಫಿ ಕ್ರಿಕೆಟ್‌ ಮಾರ್ಚ್  18ರಿಂದ 22ರ ತನಕ ನಡೆಯಲಿದೆ ಎಂದು ತಿಳಿದುಬಂದಿದೆ.
ಪುರುಷರ ಕ್ರಿಕೆಟ್ ಮಾತ್ರವಲ್ಲದೇ ಬಿಸಿಸಿಐ ವನಿತೆಯ ಕ್ರಿಕೆಟ್ ವೇಳಾಪಟ್ಟಿಯನ್ನೂ ಪ್ರಕಟಿಸಿದ್ದು, ಅಕ್ಟೋಬರ್ ನಲ್ಲಿ ಟಿ20 ಸರಣಿ ಆರಂಭವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com