ಇಷ್ಟು ದೊಡ್ಡ ನೋಬಾಲ್ ಅಂಪೈರ್ ಕಣ್ಣಿಗೆ ಕಾಣಲೇ ಇಲ್ಲವೆ; ಗೇಯ್ಲ್ ತಲೆದಂಡ, ವಿಡಿಯೋ ವೈರಲ್!

ಕ್ರಿಕೆಟ್ ಮಹಾಸಮರ ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ಗಳು ಹೆಚ್ಚು ಆ್ಯಕ್ಟಿವ್ ಆಗಿರಬೇಕು. ಆದರೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ...
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್
Updated on: 
ನಾಟಿಂಗ್ ಹ್ಯಾಮ್: ಕ್ರಿಕೆಟ್ ಮಹಾಸಮರ ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ಗಳು ಹೆಚ್ಚು ಆ್ಯಕ್ಟಿವ್ ಆಗಿರಬೇಕು. ಆದರೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ತಪ್ಪಿನಿಂದ ಯೂನಿವರ್ಸಸ್ ಬಾಸ್ ಕ್ರಿಸ್ ಗೇಯ್ಲ್ ಔಟಾಗಿದ್ದಾರೆ.
21 ರನ್ ಬಾರಿಸಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಕ್ರಿಸ್ ಗೇಯ್ಲ್ 4.5 ಓವರ್ ನಲ್ಲಿ ಸ್ಟಾರ್ಕ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಆಗಿ ಓಟಾಗಿದ್ದರು. ಆದರೆ ಸ್ಟಾರ್ಕ್ 4ನೇ ಓವರ್ ನ 4ನೇ ಎಸೆತವನ್ನು ನೋಬಾಲ್ ಹಾಕಿದ್ದರು. ಇದನ್ನು ಗಮನಿಸದ್ದರಿಂದ ನಂತರದ ಎಸೆತದಲ್ಲೇ ಗೇಯ್ಲ್ ಔಟಾಗಿದ್ದಾರೆ. 
ಸ್ಟಾರ್ಕ್ ಎಸೆದ ನೋಬಾಲ್ ಅನ್ನು ಅಂಪೈರ್ ಗಮನಿಸಿ ನೋಬಾಲ್ ನೀಡಿದ್ದರೆ ನಂತರದ ಎಸೆತ ಫ್ರೀ ಹಿಟ್ ಆಗಿರುತ್ತಿತ್ತು. ಆಗ ಬಹುಶಃ ಗೇಯ್ಲ್ ನಾಟೌಟ್ ಆಗಿರುತ್ತಿದ್ದರು. ಆದರೆ ಅಂಪೈರ್ ಕೆಟ್ಟು ತೀರ್ಪಿನಿಂದ ಗೇಯ್ಲ್ ಔಟಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com