ನಿಮ್ಮ ಅಗತ್ಯ ತಂಡಕ್ಕಿಲ್ಲ: ವಿಶ್ವಕಪ್ ತಂಡದಲ್ಲಿ ಆಡುತ್ತೇನೆಂದು ಕೇಳಿದ್ದಾಗ ಎಬಿಡಿಗೆ ಬಂದ ಉತ್ತರ!

ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರು ಪಂದ್ಯಗಳ ಸೋಲಿನೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ. ಇನ್ನು ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್...
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್
Updated on: 
ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರು ಪಂದ್ಯಗಳ ಸೋಲಿನೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ. ಇನ್ನು ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ನಿವೃತ್ತಿ ತ್ಯಜಿಸಿ ವಿಶ್ವಕಪ್ ತಂಡದಲ್ಲಿ ಆಡುತ್ತೇನೆ ಎಂದು ಹೇಳಿದ್ದಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ಅವರ ಮನವಿಯನ್ನು ತಿರಸ್ಕರಿಸಿ ದೂರವಿರಿಸಿತ್ತು. 
2018ರ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಡಿವಿಲಿಯರ್ಸ್ ವಿದಾಯ ಹೇಳಿದ್ದರು. ಇನ್ನು 2019ರ ವಿಶ್ವಕಪ್ ಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದ್ದ ಬೆನ್ನಲ್ಲೇ ಡಿವಿಲಿಯರ್ಸ್ ಮ್ಯಾನೆಜ್ ಮೆಂಟ್ ಅವರನ್ನು ಸಂಪರ್ಕಿಸಿ ನಾನು ವಿಶ್ವಕಪ್ ತಂಡದಲ್ಲಿ ಆಡುತ್ತೇನೆ ಎಂದು ಕೇಳಿದ್ದರಂತೆ ಅದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅವರ ಮನವಿಯನ್ನು ರಿಜೆಕ್ಟ್ ಮಾಡಿತ್ತಂತೆ.
ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್, ಕೋಚ್ ಒಟ್ಟಿಸ್ ಗಿಬ್ಬನ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಲಿಂಡಾ ಝೊಂಡಿ ಅವರ ಜೊತೆ ಡಿವಿಲಿಯರ್ಸ್ ಮಾತನಾಡಿದ್ದರು. ಆದರೆ ಎಬಿಡಿ ಮಾತಿಗೆ ಒತ್ತು ನೀಡದೆ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಂಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com