ಇಯಾನ್ ಮೊರ್ಗನ್
ಕ್ರಿಕೆಟ್
ವಿಶ್ವಕಪ್‌ನಲ್ಲಿ ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ ದಾಖಲೆ 17 ಸಿಕ್ಸ್; ಮೋರ್ಗನ್ ವಿಡಿಯೋ ವೈರಲ್!
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿ ದಿನಕ್ಕೊಂದು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಪಟ್ಟಿಗೆ ಇದೀಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಸೇರ್ಪಡೆಯಾಗಿದ್ದಾರೆ.
ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿ ದಿನಕ್ಕೊಂದು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಪಟ್ಟಿಗೆ ಇದೀಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಸೇರ್ಪಡೆಯಾಗಿದ್ದಾರೆ.
ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಾರ್ಗನ್ ಕೇವಲ 71 ಎಸೆತಗಳಲ್ಲಿ 148 ರನ್ ಗಳನ್ನು ಚಚ್ಚಿದರು. ಆಫ್ಘಾನಿಸ್ತಾನ ಬೌಲರ್ ಗಳನ್ನು ಬಿಟ್ಟೂ ಬಿಡದೆ ಕಾಡಿದ ಮಾರ್ಗನ್ 4 ಬೌಂಡರಿ ಮತ್ತು 17 ಸಿಕ್ಸರ್ ಗಳ ನೆರವಿನಿಂದ 148 ರನ್ ಗಳಿಸಿದರು. ಮಾರ್ಗನ್ ಅವರ ಈ ಅಮೋಘ ಇನ್ನಿಂಗ್ಸ್ ಇದೀಗ ದಾಖಲೆಯ ಪುಟ ಸೇರಿದ್ದು, ತಾವು ಸಿಡಿಸಿದ ಸಿಕ್ಸರ್ ಗಳ ಮೂಲಕ ಮಾರ್ಗನ್ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ಮತ್ತು ಭಾರತ ರೋಹಿತ್ ಶರ್ಮಾ ಅವರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಮಂಗಳವಾರ ನಡೆದ ಐಸಿಸಿ ವಿಶ್ವಕಪ್ ಅಫ್ಘಾನಿಸ್ತಾನ ವಿರುದ್ಧ ಇಯಾನ್ ಮಾರ್ಗನ್ ಅವರು 17 ಸಿಕ್ಸರ್‌ಗಳೊಂದಿಗೆ 148 ರನ್ ಸ್ಫೋಟಿಸಿದ್ದರು. ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಇಂಗ್ಲೆಂಡ್ ನಾಯಕ ಪಾತ್ರರಾಗಿದ್ದರು. ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೂ ಮಂಗಳವಾರ ಮಾರ್ಗನ್ ಭಾಜನರಾಗಿದ್ದರು.
ಅಂತೆಯೇ ಏಕದಿನ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ಮತ್ತು ರೋಹಿತ್ ಶರ್ಮಾ 16 ಸಿಕ್ಸರ್ ಗಳನ್ನು ಸಿಡಿಸಿ ಜಂಟಿ ಅಗ್ರಸ್ಥಾನಿಗಳಾಗಿದ್ದ ಈ ಮೂವರನ್ನೂ 17 ಸಿಕ್ಸರ್ ಗಳ ಮೂಲಕ ಇಯಾನ್ ಮಾರ್ಗನ್ ಹಿಂದಿಕ್ಕಿದ್ದಾರೆ. ಆ ಮೂಲಕ ಮಾರ್ಗನ್ ಏಕದಿನ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
33 sixes were hit in #ENGvAFG – a @cricketworldcup record – and @bira91 is bringing you all of them!
First off, here's Eoin Morgan's contribution – the England skipper hit 17 maximums on his way to 148
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ