ಐಸಿಸಿ ವಿಶ್ವಕಪ್ 2019: ವೀಕ್ಷಕರ ಸಂಖ್ಯೆಯಲ್ಲೂ ದಾಖಲೆ ಬರೆದ ಭಾರತ-ಪಾಕ್ ಪಂದ್ಯ!

ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಇಡೀ ಟೂರ್ನಿಯ ಕೇಂದ್ರ ಬಿಂದುವಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮುಕ್ತಾಯವಾಗಿದ್ದರೂ, ಆ ಪಂದ್ಯದ ಕುರಿತ ಸುದ್ದಿಗಳು ಮಾತ್ರ ಇನ್ನೂ ನಿಂತಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಇಡೀ ಟೂರ್ನಿಯ ಕೇಂದ್ರ ಬಿಂದುವಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮುಕ್ತಾಯವಾಗಿದ್ದರೂ, ಆ ಪಂದ್ಯದ ಕುರಿತ ಸುದ್ದಿಗಳು ಮಾತ್ರ ಇನ್ನೂ ನಿಂತಿಲ್ಲ.
ಹೌದು.. ಇದಕ್ಕೆ ಇಂಬು ನೀಡುವಂತೆ ಇದೀಗ ಅದೇ ಪಂದ್ಯದ ಮತ್ತೊಂದು ಸುದ್ದಿ ಹೊರ ಬಿದಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ದಾಖಲೆಯ ವೀಕ್ಷಣೆ ಕಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಾಡ್​ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಆಫ್ ಇಂಡಿಯಾ ವರದಿ ನೀಡಿದ್ದು, ಇಡೀ ಟೂರ್ನಿಯ ವೀಕ್ಷಕರ ಸಂಖ್ಯೆಯ ಪೈಕಿ ಶೇ. 60 ರಷ್ಟು ವೀಕ್ಷಣೆ ಈ ಒಂದು ಪಂದ್ಯಕ್ಕೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜೂನ್ 16ರಂದು ನಡೆದ ಈ ಪಂದ್ಯವನ್ನು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ವೀಕ್ಷಿಸಿದ್ದಾರೆ. ಭಾರತದಲ್ಲಿಯೇ ಇಂಡೋ-ಪಾಕ್ ಕದನವನ್ನ ಬರೊಬ್ಬರಿ 22.90 ಕೋಟಿ ಮಂದಿ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಮೊದಲ 3 ವಾರಗಳಲ್ಲಿ ನಡೆದ ವಿಶ್ವಕಪ್ ಪಂದ್ಯಗಳನ್ನ ಟಿವಿಯಲ್ಲಿ ಒಟ್ಟಾರೆಯಾಗಿ 38.10 ಕೋಟಿ ಮಂದಿ ವೀಕ್ಷಿಸಿದ್ದಾರೆ. ಅದರಲ್ಲಿ ಭಾರತ ಮತ್ತು ಪಾಕ್ ನಡುವಿನ ಮ್ಯಾಚ್ ಅನ್ನೇ 22.90 ಕೋಟಿ ಮಂದಿ ವೀಕ್ಷಿಸಿದ್ದು, ಒಟ್ಟಾರೆ ವೀಕ್ಷಣೆ ಶೇಕಡ 60ರಷ್ಟಿದೆ ಅಂತ ಬ್ರಾಡ್​ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.
ಆನ್ ಲೈನ್ ವೀಕ್ಷಣೆಯಲ್ಲೂ ಭರ್ಜರಿ ರೆಸ್ಪಾನ್ಸ್
ಇನ್ನು ಟಿವಿ ಮಾತ್ರವಲ್ಲದೇ ಆನ್ ಲೈನ್ ವೀಕ್ಷಣೆಯಲ್ಲೂ ಭಾರತ-ಪಾಕ್ ಪಂದ್ಯ ದಾಖಲೆ ಬರೆದಿದ್ದು, ವಿಶ್ವಕಪ್ ಪ್ರಸಾರದ ಜವಾಬ್ದಾರಿ ಹೊತ್ತಿರುವ ಸ್ಟಾರ್ ಇಂಡಿಯಾದ ಹಾಟ್ ಸ್ಟಾರ್ ನಲ್ಲಿ 100 ಮಿಲಿಯನ್ ಗೂ ಅಧಿಕ ಮಂದಿ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು 15.6 ಮಿಲಿಯನ್ ಮಂದಿ ಇಡೀ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಇದು ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಕೂಡ.  ಈ ದಾಖಲೆಯಲ್ಲಿ ಮೆಟ್ರೋ ನಗರಗಳ ವೀಕ್ಷಕರದ್ದು ಸಿಂಹಪಾಲಿದ್ದು, ಪಟ್ಟಣಗಳ ಮೂಲಕ ಶೇ.66 ರಷ್ಟು ವೀಕ್ಷಕರು ಇದ್ದರು ಎಂದು ತಿಳಿದುಬಂದಿದೆ.
ಇನ್ನು ಸತತ 7ನೇ ಬಾರಿಗೆ ವಿಶ್ವಕಪ್ ಸರಣಿಯಲ್ಲಿ ಭಾರತ, ಪಾಕಿಸ್ತಾನವನ್ನ ಬಗ್ಗು ಬಡಿದು, ಸೋಲಿನ ರುಚಿ ಮತ್ತೊಮ್ಮೆ ತೋರಿಸಿತ್ತು. ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ತನ್ನ ಜೈತ್ರ ಯಾತ್ರೆಯನ್ನು ಮುಂದುವರೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com