ಮಹಿಳಾ ಐಪಿಎಲ್: ಮಂಧಾನ ಆರ್ಭಟ, ಟ್ರೈಲ್‌ಬ್ಲೇಜರ್ಸ್ ತಂಡಕ್ಕೆ 2 ರನ್ ರೋಚಕ ಜಯ

ಪ್ರಸಕ್ತ ಸಾಲಿನ ಮಹಿಳಾ ಐಪಿಎಲ್ ಪಂದ್ಯಾವಳಿಯ ಚೊಚ್ಚಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಟ್ರೈಲ್‌ಬ್ಲೇಜರ್ಸ್ ತಂಡ ಸೂಪರ್‌ನೋವಾಸ್ ತಂಡವನ್ನು 2 ರನ್ ಗಳಿಂದ ಪರಾಭವಗೊಳಿಸಿದೆ.
ಮಹಿಳಾ ಐಪಿಎಲ್: ಮಂಧಾನ ಆರ್ಭಟ, ಟ್ರೈಲ್‌ಬ್ಲೇಜರ್ಸ್ ತಂಡಕ್ಕೆ 2 ರನ್ ರೋಚಕ ಜಯ
ಮಹಿಳಾ ಐಪಿಎಲ್: ಮಂಧಾನ ಆರ್ಭಟ, ಟ್ರೈಲ್‌ಬ್ಲೇಜರ್ಸ್ ತಂಡಕ್ಕೆ 2 ರನ್ ರೋಚಕ ಜಯ
Updated on: 
ಜೈಪುರ್: ಪ್ರಸಕ್ತ ಸಾಲಿನ ಮಹಿಳಾ ಐಪಿಎಲ್ ಪಂದ್ಯಾವಳಿಯ ಚೊಚ್ಚಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಟ್ರೈಲ್‌ಬ್ಲೇಜರ್ಸ್ ತಂಡ ಸೂಪರ್‌ನೋವಾಸ್ ತಂಡವನ್ನು 2  ರನ್ ಗಳಿಂದ ಪರಾಭವಗೊಳಿಸಿದೆ.
ಜೈಪುರದ ಸವಾಯ್ ಮಾನಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಟ್ರೈಲ್‌ಬ್ಲೇಜರ್ಸ್ ಆರಂಭವೇನೂ ಉತ್ತಮವಾಗಿರಲಿಲ್ಲ.  ಸುಝಿ ಬೇಟ್ಸ್ ಕೇವಲ 1 ರನ್ ಗಳಿಸಿ ಔಟಾದರು. 
ಆದರೆ ನಾಯಕಿ ಸ್ಮೃತಿ ಮಂಧಾನ ಹಾಗೂ ಹರ್ಲಿನ್ ಡಿಯೋಲ್ ಜತೆಯಾಟವಾಡಿ ರನ್ ಗಳ ಸುರಿಮಳೆಗೆರೆದರು. ಮಂಧಾನ 10  ಬೌಂಡರಿ, 3 ಸಿಕ್ಸರ್ ಜತೆಗೆ 67 ಎಸೆತಕ್ಕೆ 90  ರನ್ ಗಳಿಸಿದ್ದರೆ ಹರ್ಲಿನ್ 36 ರನ್ ಗಳಿಸಿದ್ದರು.
ಅಂತಿಮವಾಗಿ ಟ್ರೈಲ್‌ಬ್ಲೇಜರ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು.
ಇತ್ತ ಟ್ರೈಲ್‌ಬ್ಲೇಜರ್ಸ್ ನೀಡಿದ್ದ ಗುರಿ ಬೆನ್ನತ್ತಿದ ಸೂಪರ್‌ನೋವಾಸ್ ನಾಯಕಿ ಹರ್ಮನ್ ಪ್ರೀತ್ ಕೌರ್ (46), ಸೋಫಿ ಡೆವೈನ್ (32), ಚಾರ್ಮಿ ಅಟಪಟ್ಟು (26) ಹಾಗೂ ಜೆಮಿಮಾ ರೊಡ್ರಿಗಸ್ (24) ನೆರವಿನಿಂದ ನಿಗದಿತ ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಕಲೆ ಹಾಕಿತು. 
ಈ ಗೆಲುವಿನೊಡನೆ ಸ್ಮೃತಿ ಮಂಧಾನ ಪಡೆ ಮಹಿಳಾ ಐಪಿಎಲ್ ಚೊಚ್ಚಲ ಪಂದ್ಯ ಗೆದ್ದ ದಾಖಲೆ ನಿರ್ಮಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com