ಕೊನೆಯ ಎಸೆತದವರೆಗೂ ಟ್ರೋಫಿ ಚೆನ್ನೈ ಮತ್ತು ಮುಂಬೈ ಕೈ ಬದಲಾಗುತ್ತಿತ್ತು: ಎಂಎಸ್ ಧೋನಿ

ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ರೋಚಕ ಸೋಲು ಕಂಡಿದ್ದು ಈ ಮೂಲಕ ಚೆನ್ನೈ ರನ್ನರ್ ಅಪ್ ಗೆ ಖುಷಿಪಟ್ಟಿದ್ದು...
ಎಂಎಸ್ ಧೋನಿ
ಎಂಎಸ್ ಧೋನಿ
Updated on
ಹೈದರಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ರೋಚಕ ಸೋಲು ಕಂಡಿದ್ದು ಈ ಮೂಲಕ ಚೆನ್ನೈ ರನ್ನರ್ ಅಪ್ ಗೆ ಖುಷಿಪಟ್ಟಿದ್ದು, ಪಂದ್ಯದ ಕೊನೆಯ ಎಸೆತದವರೆಗೂ ಟ್ರೋಫಿ ಚೆನ್ನೈ ಮತ್ತು ಮುಂಬೈನ ಕೈ ಬದಲಾಗುತ್ತಿತ್ತು ಎಂದು ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
ಪಂದ್ಯ ಸೋಲಿನ ಬಳಿಕ ಮಾತನಾಡಿದ ಎಂಎಸ್ ಧೋನಿ, ಎರಡು ತಂಡಗಳ ನಡುವೆ ವಿಜಯ ಲಕ್ಷ್ಮಿ ತಾಂಡವವಾಡುತ್ತಿದ್ದಳು. ಒಂದೊಂದು ಎಸೆತದಲ್ಲೂ ಗೆಲುವು ಆ ಕಡೆಗೆ ಇ ಕಡೆಗೆ ವಾಲುತ್ತಿತ್ತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ನಗೆ ಬೀರಿದೆ ಎಂದು ಧೋನಿ ಹೇಳಿದ್ದಾರೆ. 
ಪಂದ್ಯದ ವೇಳೆ ಉಭಯ ತಂಡಗಳು ಸಾಕಷ್ಟು ತಪ್ಪುಗಳನ್ನು ಮಾಡುತ್ತವೆ. ಆದರೆ ಗೆದ್ದ ತಂಡ ಒಂದು ತಪ್ಪು ಕಡಿಮೆ ಮಾಡಿರುತ್ತದೆ ಹೀಗಾಗಿ ಆ ತಂಡ ಗೆಲುವು ಸಾಧಿಸುತ್ತದೆ. ಚೆನ್ನೈ ಪರ ಶೇನ್ ವಾಟ್ಸನ್ ಅದ್ಭುತವಾಗಿ ಆಡಿದರು. ಆದರೆ ಮುಂಬೈನ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಮತ್ತು ಲಸಿತ್ ಮಲಿಂಗಾ ನಮ್ಮ ಗೆಲುವನ್ನು ಕಸಿದುಕೊಂಡರು ಎಂದರು.
ಈ ಆವೃತ್ತಿಯಲ್ಲಿ ಚೆನ್ನೈ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಗಳು ಎಡವಿದರೂ, ಅದನ್ನು ನಾವು ನಿಭಾಯಿಸಿಕೊಂಡು ಬಂದೆವು. ಇನ್ನು ಬೌಲರ್ ಗಲು ಸಹ ಉತ್ತಮ ಪ್ರದರ್ಶನ ನೀಡಿ ಪ್ರಮುಕ ವಿಕೆಟ್ ಗಳನ್ನು ಕಬಳಿಸಿ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು. 
ಇದೇ ವೇಳೆ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗುಡ್ ಬೈ ಹೇಳುತ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ. 2019ರ ಐಸಿಸಿ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದೇ ಧೋನಿಯ ಕೊನೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com