ಐಪಿಎಲ್ 2019: ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್, ಡೆಲ್ಲಿಗೆ 6 ವಿಕೆಟ್ ಜಯ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.
ರಿಷಬ್ ಪಂತ್
ರಿಷಬ್ ಪಂತ್
ಜೈಪುರ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ 191 ರನ್ ಪೇರಿಸಿತ್ತು. 192 ರನ್ ಗುರಿ ಬೆನ್ನಟ್ಟಿದ ಡೆಲ್ಲಿಗೆ ರಿಷಬ್ ಪಂತ್ 36 ಎಸೆತದಲ್ಲಿ 78 ರನ್ ಸಿಡಿಸುವ ಮೂಲಕ ಇನ್ನು 4 ಎಸೆತ ಇರುವಂತೆ ಡೆಲ್ಲಿ ಗೆಲುವಿನ ನಗೆ ಬೀರಿತು.
ರಾಜಸ್ತಾನ ಪರ ಅಜಿಂಕ್ಯ ರಹಾನೆ(105) ಶತಕ ಸಿಡಿಸಿದರು. ಸ್ಟೀವ್ ಸ್ಮಿತ್ 50 ಮತ್ತು ಸ್ಟುವರ್ಟ್ ಬಿನ್ನಿ 19 ರನ್ ಪೇರಿಸಿದ್ದಾರೆ.
ಡೆಲ್ಲಿ ಪರ ಪೃಥ್ವಿ ಶಾ 42, ಶಿಖರ್ ಧವನ್ 52, ರಿಷಬ್ ಪಂತ್ 78 ಮತ್ತು ರೂತರ್ ಫೋರ್ಡ್ 11 ರನ್ ಸಿಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com