ತಂಡಕ್ಕಾಗಿ ಮಾತ್ರವಲ್ಲ, ದೇಶಕ್ಕಾಗಿ ಮುನ್ನುಗ್ಗುತ್ತೇನೆ: ವಿಂಡೀಸ್ ಪ್ರವಾಸಕ್ಕೂ ರೋಹಿತ್ ಶರ್ಮಾ ಟ್ವೀಟ್

ಟೀಂ ನಾಯಕ ವಿರಾಟ್ ಕೊಹ್ಲಿ ಜೊತೆ ಮನಸ್ತಾಪವಿದೆ ಎಂಬ ಮಾಧ್ಯಮಗಳ ವರದಿ ನಡುವೆಯೇ ಉಪ ನಾಯಕ ರೋಹಿತ್ ಶರ್ಮಾ ಮಾಡಿರುವ ಒಂದು ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿ, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಟೀಂ ನಾಯಕ ವಿರಾಟ್ ಕೊಹ್ಲಿ ಜೊತೆ ಮನಸ್ತಾಪವಿದೆ ಎಂಬ ಮಾಧ್ಯಮಗಳ ವರದಿ ನಡುವೆಯೇ ಉಪ ನಾಯಕ ರೋಹಿತ್ ಶರ್ಮಾ ಮಾಡಿರುವ ಒಂದು ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿ, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೌದು.. ರೋಹಿತ್ ಶರ್ಮಾ ತಮ್ಮ ಟ್ವಿಟರ್‌ ಮತ್ತು ಇನ್‌ ಸ್ಟಾಗ್ರಾಮ್‌ ಖಾತೆ ಮೂಲಕ ಫೋಟೊ ಒಂದನ್ನು ಶೇರ್ ಮಾಡಿದ್ದು,  ಫೋಟೋಗೆ 'ನಾನು ಪ್ರತಿಬಾರಿ ಕಣಕ್ಕಿಳಿದಾಗಲೆಲ್ಲಾ ಕೇವಲ ನನ್ನ ತಂಡಕ್ಕಾಗಿ ಮಾತ್ರ ನಾನು ಮುನ್ನುಗ್ಗುವುದಿಲ್ಲ. ಇಡೀ ದೇಶಕ್ಕಾಗಿ ಮುನ್ನಡೆಯುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಗೆ ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯದ ವೇಳೆ ಬ್ಯಾಟಿಂಗ್‌ ಆರಂಭಿಸಲು ಡ್ರೆಸಿಂಗ್‌ ರೂಮ್‌ ನಿಂದ ಮೈದಾನದ ಕಡೆಗೆ ಬರುತ್ತಿರುವ ಫೋಟೊ ಅಪ್ಲೋಡ್ ಮಾಡಿದ್ದಾರೆ. 
ಈ ಮೂಲಕ ಎಲ್ಲದಕ್ಕಿಂತಲೂ ದೇಶವೇ ಮಿಗಿಲು ಎಂದು ತಮ್ಮೊಳಗಿನ ದೇಶ ಪ್ರೇಮವನ್ನು ಸಾರಿದ್ದಾರೆ. ಒಟ್ಟಾರೆ ರೋಹಿತ್ ಶರ್ಮಾ ಅವರ ಈ ಟ್ವೀಟ್ ಇದೀಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com