ಎಂಎಸ್ ಧೋನಿ ದಾಖಲೆ ಮುರಿದ ರಿಷಭ್ ಪಂತ್!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯೊಂದನ್ನು ಟೀಂ ಇಂಡಿಯಾದ ಆಟಗಾರ ರಿಷಭ್ ಪಂತ್ ಮುರಿದಿದ್ದಾರೆ.

Published: 07th August 2019 12:00 PM  |   Last Updated: 07th August 2019 11:10 AM   |  A+A-


Rishabh Pant breaks MS Dhoni's India record during Guyana T20I heroics

ಎಂಎಸ್ ಧೋನಿ ದಾಖಲೆ ಮುರಿದ ರಿಷಭ್ ಪಂತ್!

Posted By : SBV SBV
Source : Online Desk
ಗುಯಾನ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯೊಂದನ್ನು ಟೀಂ ಇಂಡಿಯಾದ ಆಟಗಾರ ರಿಷಭ್ ಪಂತ್ ಮುರಿದಿದ್ದಾರೆ. 

ಗುಯಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್-ಭಾರತ ನಡುವಿನ 3ನೇ ಟಿ-20 ಪಂದ್ಯದಲ್ಲಿ ಪಂದ್ಯವನ್ನು ಗೆಲ್ಲಿಸುವ 65 ರನ್ ಗಳಿಸುವ ಮೂಲಕ ರಿಷಭ್ ಪಂತ್ ಎಂಎಸ್ ಧೋನಿ ದಾಖಲೆಯನ್ನು ಮುರಿದಿದ್ದಾರೆ. 

ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ದಾಖಲೆ ಧೋನಿ ಹೆಸರಿನಲ್ಲಿತ್ತು. 2017 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಭಾರತ-ಇಂಗ್ಲೆಂಡ್ ಪಂದ್ಯದಲ್ಲಿ ಎಂಎಸ್ ಧೋನಿ 56 ರನ್ ಗಳನ್ನು ಗಳಿಸಿದ್ದರು. ದಕ್ಷಿಣ ಆಫ್ರಿಕಾದ ವಿರುದ್ಧದ ಟಿ-20 ಪಂದ್ಯದಲ್ಲಿ ಧೋನಿ 52 ರನ್ ಗಳಿಸಿದ್ದ ದಾಖಲೆ ಈಗ 3 ನೇ ಸ್ಥಾನದಲ್ಲಿದೆ. 

ವೆಸ್ಟ್ ಇಂಡೀಸ್ ವಿರುದ್ಧದ ಎಲ್ಲಾ ಫಾರ್ಮೆಟ್ ಗಳ ಪಂದ್ಯಗಳಲ್ಲಿ ಎಂಎಸ್ ಧೋನಿ ಬದಲಿಗೆ ರಿಷಭ್ ಪಂತ್ ನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ವಿರಾಟ್ ಕೊಹ್ಲಿ-ರಿಷಭ್ ಪಂತ್ 106 ರನ್ ಗಳ ಜೊತೆಯಾಟ ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿಗೆ ಕಾರಣವಾಯಿತು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp