3ನೇ ಏಕದಿನ: ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್ ಆಯ್ಕೆ, ಗೇಯ್ಲ್ ಭರ್ಜರಿ ಬ್ಯಾಟಿಂಗ್

ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ನೀಡಿದ್ದಾರೆ.
ಕ್ರಿಸ್ ಗೇಯ್ಲ್ ಬ್ಯಾಟಿಂಗ್ ವೈಖರಿ
ಕ್ರಿಸ್ ಗೇಯ್ಲ್ ಬ್ಯಾಟಿಂಗ್ ವೈಖರಿ

ಟ್ರಿನಿಡಾಡ್: ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ನೀಡಿದ್ದಾರೆ.

ಟ್ರಿನಿಡಾಡ್ ನ, ಪೋರ್ಟ್ ಆಫ್ ಸ್ಪೈನ್ ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ 3ನೇ ಏಕದಿನ ಪಂದ್ಯ ನಡೆಯುತ್ತಿದ್ದು, ವಿಂಡೀಸ್ ಪರ ಕ್ರಿಸ್ ಗೇಯ್ಲ್ ಮತ್ತು ಎವಿನ್ ಲೂಯಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಬ್ಯಾಟಿಂಗ್ ಗೆ ಸಹಕಾರಿಯಾಗುವ ಪಿಚ್ ನಲ್ಲಿ ಅತ್ಯುತ್ತಮ ಆರಂಭ ಪಡೆದಿರುವ ವಿಂಡೀಸ್ ತಂಡ ಟಿ20 ಮಾದರಿಯಂತೆ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಕೇವಲ 9.3 ಓವರ್ ನಲ್ಲಿಯೇ 113 ರನ್ ಗಳನ್ನು ಪೇರಿಸಿದೆ.

ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಕೇವಲ 32 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 64 ರನ್ ಸಿಡಿಸಿದ್ದು, ಮತ್ತೊಂದು ಬದಿಯಲ್ಲಿರುವ ಎವಿನ್ ಲೂಯಿಸ್ ಕೂಡ ಕೇವಲ 26 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾರೆ.

ಇತ್ತ ಭಾರತೀಯ ಬೌಲರ್ ಗಳು ವಿಂಡೀಸ್ ಅಬ್ಬರದ ಬ್ಯಾಟಿಂಗ್ ಹೈರಾಣಾಗಿದ್ದು, ವಿಕೆಟ್ ಕಬಳಿಸುವುದಿರಲಿ, ರನ್ ವೇಗಕ್ಕೆ ಬ್ರೇಕ್ ಹಾಕಲೂ ಕೂಡ ಪರದಾಡುವಂತಾಗಿದೆ.

ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಡಕ್ವರ್ಥ್ ಲೂಯಿಸ್ ನಿಯಮ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ. ಇದೇ ಕಾರಣಕ್ಕೇ ವಿಂಡೀಸ್ ತಂಡ ರನ್ ವೇಗವನ್ನು ಹೆಚ್ಚಿಸಿಕೊಂಡು ಬ್ಯಾಟಿಂಗ್ ಮಾಡುತ್ತಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com