3ನೇ ಏಕದಿನ ಪಂದ್ಯ: ದಾಖಲೆ ಬರೆದ ಗೇಯ್ಲ್, ಎವಿನ್ ಲೂಯಿಸ್ ಜೊತೆಯಾಟ

ಮೊದಲ 10 ಓವರ್ ನಲ್ಲೇ ದಾಖಲೆಯ ಶತಕದ ದಾಟ, 65 ಎಸೆತಗಳಲ್ಲಿ 115 ರನ್
ಕ್ರಿಸ್ ಗೇಲ್ಎವಿನ್ ಲೂಯಿಸ್
ಕ್ರಿಸ್ ಗೇಲ್ಎವಿನ್ ಲೂಯಿಸ್

ಟ್ರಿನಿಡಾಡ್: ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಆಟಗಾರರಾದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಮತ್ತು ಎವಿನ್ ಲೂಯಿಸ್ ದಾಖಲೆಯ ಜೊತೆಯಾಟವಾಡಿದ್ದಾರೆ.

ಟ್ರಿನಿಡಾಡ್ ನ, ಪೋರ್ಟ್ ಆಫ್ ಸ್ಪೈನ್ ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ 3ನೇ ಏಕದಿನ ಪಂದ್ಯ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಂಡೀಸ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ವಿಂಡೀಸ್ ನ ಆರಂಭಿಕ ದಾಂಡಿಗರಾದ ಕ್ರಿಸ್ ಗೇಯ್ಲ್ ಮತ್ತು ಎವಿನ್ ಲೂಯಿಸ್ ಮೊದಲ ವಿಕೆಟ್ ಗೆ 115 ರನ್ ಕಲೆ ಹಾಕಿದರು. ಅದು ಕೂಡ ಮೊದಲ 10 ಓವರ್ ನಲ್ಲಿಯೇ...

ಮೊದಲ ಓವರ್ ನಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕ್ರಿಸ್ ಗೇಯ್ಲ್, ಕೇವಲ 41 ಎಸೆತಗಳಲ್ಲಿ 72 ರನ್ ಸಿಡಿಸಿದರು. ಅವರ ಈ ಭರ್ಜರಿ ಬ್ಯಾಟಿಂಗ್ ನಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿ ಸೇರಿತ್ತು, ಇನ್ನು ಗೇಯ್ಲ್ ಗೆ ಉತ್ತಮ ಸಾಥ್ ನೀಡಿದ ಎವಿನ್ ಲೂಯಿಸ್, 29 ಎಸೆತಗಳಲ್ಲಿ 43 ರನ್ ಪೇರಿಸಿದರು. ಅವರೂ ಕೂಡ 3 ಸಿಕ್ಸರ್ ಹಾಗೂ 5 ಬೌಂಡರಿ ಗಳಿಸಿದ್ದರು. ಈ ಜೋಡಿಯನ್ನು ಯಜುವೇಂದ್ರ ಚಹಲ್, 11ನೇ ಓವರ್ ನಲ್ಲಿ ಬೇರ್ಪಡಿಸಿ ಭಾರತೀಯ ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿದರು.

ದಾಖಲೆಯ ಜೊತೆಯಾಟ
ಇನ್ನು ಗೇಯ್ಲ್ ಮತ್ತು ಲೂಯಿಸ್ ಅವರ ಭರ್ಜರಿ ಜೊತೆಯಾಟ ದಾಖಲೆ ಬರೆದಿದ್ದು, 2012ರಿಂದೀಚೆಗೆ ಮೊದಲ ಹತ್ತು ಓವರ್ ನಲ್ಲಿ ದಾಖಲಾದ 3ನೇ ಗರಿಷ್ಛ ರನ್ ಗಳಿಕೆ ಇದಾಗಿದೆ. 2015ರಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಬಳಗ ಕೇವಲ 8.2 ಓವರ್ ನಲ್ಲಿ 118 ರನ್ ಚಚ್ಚಿತ್ತು. ಇದು ಈ ವರೆಗಿನ ಗರಿಷ್ಠ ಮೊತ್ತವಾಗಿದೆ. ಆ ಬಳಿಕ 2015ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ನ್ಯೂಜಿಲೆಂಡ್ ತಂಡ 116ರನ್ ಸಿಡಿಸಿತ್ತು. 2018ರಲ್ಲಿ ಪಳ್ಳೇಕಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 113 ರನ್ ಗಳಿಸಿತ್ತು. ಈ ದಾಖಲೆಯನ್ನು ವಿಂಡೀಸ್ ಮುರಿದಿದ್ದು, ವಿಂಡೀಸ್ ತಂಡ ಮೊದಲ ಹತ್ತು ಓವರ್ ನಲ್ಲಿ 114 ಗಳಿಸಿ ಈ ದಾಖಲೆಯನ್ನು ಹಿಂದಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com