ಅಂಗವಿಕಲರ ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್ ಮಣಿಸಿದ ಭಾರತ ಚಾಂಪಿಯನ್‌

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಆತಿಥ್ಯದಲ್ಲಿ ನಡೆದ ಹತ್ತು ದಿನಗಳ ಟೂರ್ನಿಯ ಫೈನಲ್‌ ಪಂದ್ಯ
ಚಾಂಪಿಯನ್ ಭಾರತ
ಚಾಂಪಿಯನ್ ಭಾರತ

ನವದೆಹಲಿ: ಅಂಗವಿಕಲರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಕ್ಕಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಆತಿಥ್ಯದಲ್ಲಿ ನಡೆದ ಹತ್ತು ದಿನಗಳ ಟೂರ್ನಿಯ ಫೈನಲ್‌ ಪಂದ್ಯ ಮಂಗಳವಾರ ರಾತ್ರಿ ನಡೆಯಿತು. ಅಂತಿಮ ಹಣಾಹಣಿಯಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಭಾರತ ತಂಡ ಅಂಗವಿಕಲರ ಚೊಚ್ಚಲ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ 20 ಓವರ್‌ ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 180 ರನ್‌ ಗಳಿಸಿತು. ಭಾರತ ನೀಡಿದ ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಂಗ್ಲರು ಗುರಿ ಬೆನ್ನು ಹತ್ತುವಲ್ಲಿ ಪರದಾಡಿದರು. ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳತ್ತಾ ಸಾಗಿದ ಆತಿಥೇಯರು ನಿಗದಿತ ಓವರ್‌ ಗಳು ಮುಕ್ತಾಯದ ಹೊತ್ತಿಗೆ 9 ವಿಕೆಟ್‌ ನಷ್ಟಕ್ಕೆ 144 ರನ್ ಗಳನ್ನಷ್ಟೇ ಗಳಿಸಿದರು. ಆ ಮೂಲಕ ಭಾರತದ ಎದುರು 36 ರನ್ ಗಳ ಸೋಲು ಕಂಡರು.

ಭಾರತಕ್ಕೆ ಎಸ್‌. ರವೀಂದ್ರ (53) ಅರ್ಧಶತಕ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಅಂತೆಯೇ ಬೌಲಿಂಗ್ ನಲ್ಲಿ ಸನ್ನಿ ಗೋಯಟ್ ಮತ್ತು ಕುನಾಲ್ ಫಣಸೆ ತಲಾ 2 ವಿಕೆಟ್ ಕಬಳಿಸಿ ಅಂಗ್ಲರ ಪತನಕ್ಕೆ ಕಾರಣರಾದರು.

ಕೇವಲ 15 ರನ್ ನೀಡಿ 2 ವಿಕೆಟ್ ಕುನಾಲ್ ಫಣಸೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com