'ಕೊಹ್ಲಿ ಇರಬೇಕಿತ್ತು', ಮೋಸಗಾರ ಅಂತ ಸ್ಮಿತ್‌ರನ್ನು ನಿಂಧಿಸುವವರು ಕ್ರಿಕೆಟ್‌ ಅಭಿಮಾನಿಗಳಲ್ಲ: ಜಾನ್ಸನ್‌

ಚೆಂಡು ವಿರೂಪ ಪ್ರಕರಣದ ಬಳಿಕ ಅಭಿಮಾನಿಗಳಲ್ಲಿ ಮನಸ್ಸಿನಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೋಸಗಾರನಾಗಿ ಉಳಿದುಬಿಟ್ಟಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯದ ವೇಳೆ ಸ್ಮಿತ್ ರನ್ನು ಅಭಿಮಾನಿಗಳು...

Published: 18th August 2019 03:52 PM  |   Last Updated: 18th August 2019 03:52 PM   |  A+A-


Virat Kohli-Steve Smith

ವಿರಾಟ್ ಕೊಹ್ಲಿ-ಸ್ಟೀವನ್ ಸ್ಮಿತ್

Posted By : Vishwanath S
Source : Online Desk

ಲಂಡನ್: ಚೆಂಡು ವಿರೂಪ ಪ್ರಕರಣದ ಬಳಿಕ ಅಭಿಮಾನಿಗಳಲ್ಲಿ ಮನಸ್ಸಿನಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೋಸಗಾರನಾಗಿ ಉಳಿದುಬಿಟ್ಟಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯದ ವೇಳೆ ಸ್ಮಿತ್ ರನ್ನು ಅಭಿಮಾನಿಗಳು ಚೀಟರ್ ಎಂದು ಕರೆದಾಗ ಅಲ್ಲಿ ಕೊಹ್ಲಿ ಮಧ್ಯೆ ಪ್ರವೇಶಿಸಿ ಅಭಿಮಾನಿಗಳನ್ನು ತಣ್ಣಗಾಗಿಸಿದ್ದರು. ಆದರೆ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಮತ್ತೆ ಅದೇ ರೀತಿಯ ದೃಶ್ಯ ಮರುಕಳಿಸಿದೆ. 

ಆ್ಯಶಿಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ ಅವರನ್ನು ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಚೀಟರ್, ಚೀಟರ್ ಎಂದು ನಿಂಧಿಸಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಮಿಚೆಲ್‌ ಜಾನ್ಸನ್‌ ಸ್ಮಿತ್ ರನ್ನು ನಿಂದಿಸುವವರು ಕ್ರಿಕೆಟ್‌ ಪ್ರೇಮಿಗಳು ಆಗಲು ಸಾಧವೇ ಇಲ್ಲ ಎಂದು ಹೇಳಿದ್ದಾರೆ.

ಸ್ಮಿತ್‌ ಅವರನ್ನು ಇಂಗ್ಲೆಂಡ್‌ ಅಭಿಮಾನಿಗಳಿಂದ ನಿಂಧನೆ ಮಾತುಗಳು ನಿಜವಾಗಿಯೂ ಬೇಸರ ಉಂಟು ಮಾಡಿದೆ. ಜನರು ಏನು ಹೇಳುತ್ತಾರೆ ಎಂಬ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ. ಸ್ಮಿತ್‌ ಅವರನ್ನು ಏಕೆ ಚೀಟರ್‌ ಎಂದು ಕರೆಯುತ್ತಾರೆ. ಇದರಿಂದ ಅವರಿಗೆ ಏನು ಲಾಭ ಸಿಗುತ್ತದೆ ಎಂದು ಜಾನ್ಸನ್‌ ಖಾರವಾಗಿ ಹೇಳಿದ್ದಾರೆ.  

ನಾಲ್ಕನೇ ದಿನವಾಗಿದ್ದ ಶನಿವಾರ ಸ್ಮಿತ್‌ ಎರಡು ಬಾರಿ ಆರ್ಚರ್‌ ಎಸೆದ ಚೆಂಡಿನಲ್ಲಿ ಏಟು ತಿಂದರು. ಮೊದಲನೇ ಬಾರಿ ಮೊಣಕೈ ಹಾಗೂ ಎರಡನೇ ಬಾರಿ ಕತ್ತಿನ ಭಾಗಕ್ಕೆ ಚೆಂಡು ಬಲವಾಗಿ ಬಡಿದಿತ್ತು. ಈ ವೇಳೆ ತಕ್ಷಣ ಅಂಗಳ ತೊರೆದಿದ್ದರು. ಎರಡೂ ತಂಡಗಳ ಫಿಜಿಯೊ ಸ್ಮಿತ್‌ ಅವರನ್ನು ಉಪಚರಿಸಿದರು. ನಂತರ ಮತ್ತೊಮ್ಮೆ ಸ್ಮಿತ್ ಕ್ರೀಸ್‌ಗೆ  ಮರಳುತ್ತಿದ್ದಾಗ ಜನರು ನಿಂಧಿಸಿದ್ದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp