ನಿಧಾನಗತಿಯ ಬೌಲಿಂಗ್: ವೆಸ್ಟ್‌ ಇಂಡೀಸ್ ತಂಡಕ್ಕೆ ದಂಡ

ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಭಾರತ ವಿರುದ್ಧ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದ ವೆಸ್ಟ್‌ ಇಂಡೀಸ್ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ.
ನಿಧಾನಗತಿಯ ಬೌಲಿಂಗ್: ವೆಸ್ಟ್‌ ಇಂಡೀಸ್ ತಂಡಕ್ಕೆ ದಂಡ
ನಿಧಾನಗತಿಯ ಬೌಲಿಂಗ್: ವೆಸ್ಟ್‌ ಇಂಡೀಸ್ ತಂಡಕ್ಕೆ ದಂಡ

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಭಾರತ ವಿರುದ್ಧ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದ ವೆಸ್ಟ್‌ ಇಂಡೀಸ್ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ.

ಮೊದಲ ಇನಿಂಗ್ಸ್‌‌ನಲ್ಲಿ ವೆಸ್ಟ್‌ ಇಂಡೀಸ್ ತಂಡ ನಾಲ್ಕು ಓವರ್‌ಗಳು ನಿಧಾನಗತಿಯಿಂದ ಕೂಡಿದ್ದವು. ಹಾಗಾಗಿ, ಐಸಿಸಿ ಎಲೈಟ್ ಪ್ಯಾನೆಲ್ ಪಂದ್ಯ ರೆಫರಿ ಡೇವಿಡ್ ಬೂನ್ ಅವರು ಕಿರೋನ್ ಪೊಲಾರ್ಡ್ ಪಡೆಗೆ ದಂಡ ವಿಧಿಸಿದ್ದಾರೆ.

ವೆಸ್ಟ್ ಇಂಡೀಸ್ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಐಸಿಸಿ ನಿಯಮ 2.22 ಉಲ್ಲಂಸಿದಂತಾಗಿದೆ. ಪಂದ್ಯದ ಪ್ರತಿಯೊಂದಿ ಓವರ್ ಕೂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಲಾಗಿದೆ. ಹಾಗಾಗಿ, ಆಟಗಾರರಿಗೆ ಪಂದ್ಯದ ಶುಲ್ಕದಲ್ಲಿ ಶೇ. 20 ರಷ್ಟು ಸೇರಿದಂತೆ ಒಟ್ಟಾರೆ ತಂಡಕ್ಕೆ ಶೇ. 80 ರಷ್ಟು ದಂಡ ವಿಧಿಸಲಾಗಿದೆ.

ಪಂದ್ಯ ಮುಗಿದ ಬಳಿಕ ಕಿರೋನ್ ಪೊಲಾರ್ಡ್ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ, ವಿಚಾರಣೆಗೆ ಮಾಡುವ ಅಗತ್ಯವಿಲ್ಲ.  ಆನ್ ಪೀಲ್ಡ್‌ ಅಂಪೈರ್‌ಗಳಾದ ನಿತಿನ್ ಮೆನನ್ ಹಾಗೂ ಶಾನ್ ಜಾರ್ಜ್, ಮೂರನೇ ಅಂಪೈರ್ ರೊಡ್ನಿ ಟಕ್ಕರ್ ಹಾಗೂ ನಾಲ್ಕನೇ ಅಂಪೈರ್ ಅನಿಲ್ ಚೌಧರಿ ಅವರು ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ.

ಭಾರತ ನೀಡಿದ್ದ 288 ರನ್ ಗುರಿಯನ್ನು ವೆಸ್ಟ್‌ ಇಂಡೀಸ್ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೆ ಬೆನ್ನತ್ತಿ  ಗೆಲುವಿನ ನಗೆ ಬೀರಿತ್ತು. ವಿಂಡೀಸ್ ಗೆಲುವಿನಲ್ಲಿ ಶಿಮ್ರಾನ್ ಹೆಟ್ಮೇರ್ (139) ಹಾಗೂ ಶಾಯ್ ಹೋಪ್ (102) ಬಹುಮುಖ್ಯ ಪಾತ್ರವಹಿಸಿದ್ದರು. ಡಿ.18 ರಂದು ವಿಶಾಖಪಟ್ಟಣಂನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com