ಆಸೀಸ್ ನಾಯಕ ಟಿಮ್ ಪೈನ್ ಪತ್ನಿ ಮತ್ತು ಮಕ್ಕಳೊಂದಿಗೆ 'ಬೇಬಿಸಿಟ್ಟರ್' ರಿಷಬ್ ಪಂತ್, ಫೋಟೋ ವೈರಲ್!

ಆಸೀಸ್ ನಾಯಕ ಟಿಮ್ ಪೈನ್ ಪಂತ್ ರನ್ನು ಕಿಚಾಯಿಸುವ ಬರದಲ್ಲಿ ನಾನು ನನ್ನ ಹೆಂಡತಿ ಸಿನಿಮಾಗೆ ಹೋಗುತ್ತೀರಿ, ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯಾ ಎಂದು ಕಿಚಾಯಿಸಿದ್ದರು.
ರಿಷಬ್ ಪಂತ್-ಬೊನೀ ಪೈನ್
ರಿಷಬ್ ಪಂತ್-ಬೊನೀ ಪೈನ್
ಮೆರ್ಬರ್ನ್: ಆಸೀಸ್ ನಾಯಕ ಟಿಮ್ ಪೈನ್ ಪಂತ್ ರನ್ನು ಕಿಚಾಯಿಸುವ ಬರದಲ್ಲಿ ನಾನು ನನ್ನ ಹೆಂಡತಿ ಸಿನಿಮಾಗೆ ಹೋಗುತ್ತೀರಿ, ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯಾ ಎಂದು ಕಿಚಾಯಿಸಿದ್ದರು. ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಬಳಿಕ ಇದೀಗ ಪಂತ್ ನೇರವಾಗಿ ಪೈನ್ ಮನೆಗೆ ಹೋಗಿ ಬೊನೀ ಪೈನ್ ಹಾಗೂ ಮಕ್ಕಳೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ  ಟಿಮ್ ಪೈನ್ ಮತ್ತು ಟೀಂ ಇಂಡಿಯಾ ನಾಯಕ ರಿಷಬ್ ಪಂತ್ ನಡುವಿನ ಸ್ಲೆಡ್ಜಿಂಗ್ ವೈರಲ್ ಆಗಿತ್ತು. ಮೊದಲಿಗೆ ಟಿಮ್ ಪೈನ್ ಪಂತ್ ರನ್ನು ಬೇಬಿ ಸಿಟ್ಟರ್(ಮಕ್ಕಳನ್ನು ನೋಡಿಕೊಳ್ಳುವವರು) ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ರಿಷಬ್ ಪಂತ್ ಆಸೀನ್ ನಾಯಕ ಪೈನ್ ರನ್ನು ತಾತ್ಕಾಲಿಕ ನಾಯಕ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. 
ಸ್ಟಂಪ್ ಗೆ ಅಳವಡಿಸಿದ್ದ ಮೈಕ್ ಮೂಲಕ ಈ ಇಬ್ಬರು ಕ್ರಿಕೆಟಿಗರ ಸ್ಲೆಡ್ಜಿಂಗ್ ಗಳು ಕೇಳಿಸಿತ್ತು. ಅಂತೆ ಈ ವಿಡಿಯೋಗಳು ಸಹ ಸಖತ್ ವೈರಲ್ ಆಗಿದ್ದವು. ಇದೀಗ ಟಿಮ್ ಪೈನ್ ಹೇಳಿದಂತೆ ರಿಷಬ್ ಪಂತ್ ಪೈನ್ ಮನೆಗೆ ಹೋಗಿ ಆತನ ಪತ್ನಿ ಮತ್ತು ಮಕ್ಕಳೊಂದಿಗೆ ಪೋಟೋ ಹಿಡಿಸಿಕೊಂಡಿದ್ದಾರೆ. ಈ ಮೂಲಕ ಈ ಸ್ಲೆಡ್ಜಿಂಗ್ ನಾಲ್ಕನೇ ಪಂದ್ಯದಲ್ಲೂ ಮುಂದುವರೆಯಲಿದೆ ಎಂದು ತಿಳಿಸಿಕೊಟ್ಟಿದ್ದಾರೆ.
ಟಿಮ್ ಪೈನ್ ಮನೆಯಲ್ಲಿ ಕೆಲವೊತ್ತು ಕಳೆದ ರಿಷಬ್ ಪಂತ್ ದಂಪತಿಗಳಿಗೆ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com