ಎಚ್ಚರ ತಪ್ಪಿದ ಬ್ಯಾಟ್ಸ್‌ಮನ್; ಧೋನಿಯಂತೆ ರನೌಟ್ ಮಾಡಿದ ಲೇವಿಸ್, ವಿಡಿಯೋ ವೈರಲ್!

ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ ವಿಕೆಟ್ ಹಿಂದೆ ಮಾಡಿರುವ ದಾಖಲೆಗಳಿಗೆ ಯಾರು ಸರಿಸಮಾನರಾಗುವುದಿಲ್ಲ. ಅಲ್ಲದೆ ವೇಗವಾಗಿ ಸ್ಟಂಪ್ ಮತ್ತು ರನೌಟ್ ಮಾಡಿರುವ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ ವಿಕೆಟ್ ಹಿಂದೆ ಮಾಡಿರುವ ದಾಖಲೆಗಳಿಗೆ ಯಾರು ಸರಿಸಮಾನರಾಗುವುದಿಲ್ಲ. ಅಲ್ಲದೆ ವೇಗವಾಗಿ ಸ್ಟಂಪ್ ಮತ್ತು ರನೌಟ್ ಮಾಡಿರುವ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಇದೀಗ ಇದೇ ರೀತಿಯ ರನೌಟ್ ಅನ್ನು ಕೀಪರ್ ಲೇವಿಸ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಟಿ20 ಬ್ಲಾಸ್ಟ್ ಟೂರ್ನಮೆಂಟ್ ನಲ್ಲಿ ಹ್ಯಾಂಪ್‌ಶೈರ್‌ ತಂಡದ ವಿಕೆಟ್ ಕೀಪರ್ ಲೇವಿಸ್ ಮೆಕ್ಮ್ಯಾನಸ್ ಸಸೆಕ್ಸ್ ತಂಡದ ಬ್ಯಾಟ್ಸ್ ಮನ್ ಲವ್ರಿ ಇವಾನ್ಸ್ ರನ್ನು ಚಾಕ್ಷಣತನದಿಂದ ರನೌಟ್ ಮಾಡಿದ್ದಾರೆ. 
10ನೇ ಓವರ್ ನಲ್ಲಿ ಇವಾನ್ಸ್ ಬಿರುಸಿನ ಹೊಡೆತಕ್ಕೆ ಮುಂದಾದರು ಈ ವೇಳೆ ಚೆಂಡು ಬ್ಯಾಟ್ಸ್ ಗೆ ಮಿಸ್ ಆಗಿ ಕೀಪರ್ ಕೈಸೇರಿತು. ಇದನ್ನು ಗಮನಿಸದ ಇವಾನ್ಸ್ ಮುಂದಕ್ಕೆ ಹೋದರು. ಕೂಡಲೇ ಕೈಯಲ್ಲಿದ್ದ ಚೆಂಡನ್ನು ವಿಕೆಟ್ ಗೆ ಬಡಿದು ರನೌಟ್ ಮಾಡಿದರು. 
ಮೊದಲು ಬ್ಯಾಟಿಂಗ್ ಮಾಡಿದ್ದ ಸಸೆಕ್ಸ್ ನಿಗದಿತ ಓವರ್ ನಲ್ಲಿ 188 ರನ್ ಪೇರಿಸಿತ್ತು. 189 ರನ್ ಗುರಿ ಬೆನ್ನಟ್ಟಿದ ಹ್ಯಾಂಪ್‌ಶೈರ್‌ 174 ರನ್ ಗಳಿಗೆ ಆಲೌಟ್ ಆಗಿ 14 ರನ್ ಗಳಿಂದ ಸೋಲಿಗೆ ಶರಣಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com