ಪಾಕಿಸ್ತಾನದ ವಿರುದ್ದ ಆಕ್ರಮಣಕಾರಿಯಾಗಿ ಆಡಿ: ಕೊಹ್ಲಿ ಬಾಯ್ಸ್ ಗೆ ಸಚಿನ್ ಸಲಹೆ!

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಆಕ್ರಮಣಕಾರಿ ಆಟದ ಪ್ರದರ್ಶನ ಮಾಡಿದರೆ ಭಾರತಕ್ಕೆ ಲಾಭವಾಗುತ್ತದೆ ಎಂದು ಕ್ರಿಕೆಟ್ ಲೆಜೆಂಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಾಟಿಂಗ್ ಹ್ಯಾಮ್‌: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಆಕ್ರಮಣಕಾರಿ ಆಟದ ಪ್ರದರ್ಶನ ಮಾಡಿದರೆ ಭಾರತಕ್ಕೆ ಲಾಭವಾಗುತ್ತದೆ ಎಂದು ಕ್ರಿಕೆಟ್ ಲೆಜೆಂಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಬಹುನಿರೀಕ್ಷಿತ ಹೈವೋಲ್ಟೇಜ್ ಕಾದಾಟಕ್ಕೆ ಭಾರತ ತಂಡಕ್ಕೆ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಉಪಯುಕ್ತ ಸಲಹೆ ನೀಡಿದ್ದು, ಸಚಿನ್ ರ ಪ್ರಕಾರ ಭಾರತ ತಂಡ ಪಾಕಿಸ್ತಾನವನ್ನು ಇತರೆ ತಂಡಗಳಂತೆ ಪರಿಗಣಿಸಿ ಆಡಬೇಕು. ಯಾವುದ ರೀತಿಯ ಒತ್ತಡವನ್ನು ಹೇರಿಕೊಳ್ಳದೇ ಸಕಾರಾತ್ಮಕವಾಗಿ ಆಡಿದರೆ ಖಂಡಿತಾ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂದು ಸಚಿನ್ ಹೇಳಿದ್ದಾರೆ.
ಸಚಿನ್ ದೃಷ್ಟಿಕೋನದಲ್ಲಿ ಮೊಹಮ್ಮದ್‌ ಅಮೀರ್‌ ಹಾಗೂ ವಹಾಬ್‌ ರಿಯಾಜ್‌ ಅವರನ್ನೊಳಗೊಂಡ ಪಾಕಿಸ್ತಾನ ಬೌಲಿಂಗ್‌ ಪಡೆ ಬಲಷ್ಠವಾಗಿದೆ. ಭಾರತ ತಂಡದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರೇ ಅವರ ಪ್ರಮುಖ ಗುರಿಯಾಗಿದೆ.  ಅದ್ಭುತ ಲಯದಲ್ಲಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ವಿಕೆಟ್‌ ಬಹುಬೇಗ ಉರುಳಿಸುವುದೇ ಪಾಕಿಸ್ತಾನದ ಮೊದಲ ಗುರಿ. ಆದ್ದರಿಂದ ಇವರಿಬ್ಬರನ್ನು ಕಟ್ಟಿಹಾಕಲು ಪಾಕ್‌ ಸೂಕ್ತ ತಂತ್ರಗಾರಿಕೆಯೊಂದಿಗೆ ಕಣಕ್ಕೆ ಇಳಿಯಲಿದೆ. ಹಾಗಾಗಿ, ಅಮೀರ್‌ ಹಾಗೂ ವಹಾಬ್‌ ಅವರ ಪ್ರಮುಖ ಆದ್ಯತೆ ಇವರ ವಿಕೆಟ್‌ ಬೇಗ ಪಡೆಯುವುದೇ ಆಗಿದೆ. ಆದ್ದರಿಂದ ಕೊಹ್ಲಿ ಹಾಗೂ ರೋಹಿತ್‌ ದೀರ್ಘ ಅವಧಿ ಕ್ರೀಸ್‌ ನಲ್ಲಿ ಉಳಿಯಬೇಕು" ಎಂದು ಸಚಿನ್‌ ಸಲಹೆ ನೀಡಿದ್ದಾರೆ.  
ನ್ಯೂಜಿಲೆಂಡ್‌ ಹಾಗೂ ಭಾರತ ನಡುವಣ ಪಂದ್ಯ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಮಳೆಯಿಂದ ರದ್ದಾದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಸಚಿನ್‌ "ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ಇನ್ನುಳಿದವರು ಸಾಥ್‌ ನೀಡಬೇಕು. ಮೊಹಮ್ಮದ್‌ ಅಮೀರ್‌ ಅವರ ದಾಳಿಯನ್ನು ಋಣಾತ್ಮಕವಾಗಿ ಎದುರಿಸದೆ ತಮ್ಮ ಸ್ವಾಭಾವಿಕ ಬ್ಯಾಟಿಂಗ್‌ ಪ್ರದರ್ಶನ ತೋರಿ, ಧನಾತ್ಮಕವಾಗಿ ಬ್ಯಾಟಿಂಗ್‌ ಮಾಡಬೇಕು. ಅಲ್ಲದೇ, ಇತರೆ ತಂಡಗಳೊಂದಿಗೆ ಆಡುವ ರೀತಿ ಪಾಕ್‌ ವಿರುದ್ಧ ಆಡಬೇಕು. ಎಲ್ಲ ವಿಭಾಗಗಳಲ್ಲಿಯೂ ಆಕ್ರಮಣಕಾರಿ ಪ್ರದರ್ಶನ ತೋರುವ ಅಗತ್ಯವಿದೆ. ಭಾರತದ ಬೌಲರ್ ಗಳು ಆತ್ಮವಿಶ್ವಾಸದಿಂದ ಬೌಲಿಂಗ್‌ ಮಾಡಬೇಕು. ಅನಗತ್ಯ ಮಾತು ಅಥವಾ ಮಾತಿನ ಸಮರಗಳನ್ನು ನಿಯಂತ್ರಿಸಬೇಕು" ಎಂದು ಸಚಿನ್‌ ಬೌಲರ್‌ ಗಳಿಗೆ ಕಿವಿ ಮಾತು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com