ಅದ್ಭುತ ಕ್ಯಾಚ್‌ ಹಿಡಿದ ಬೆನ್‌ ಸ್ಟೋಕ್ಸ್ ಗೆ ಟ್ವಿಟ್ ನಲ್ಲಿ ಶ್ಲಾಘನೆಗಳ ಮಹಾಪೂರ

ಗುರುವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್‌ ಸಮೀಪ ಅಧ್ಬುತ ಕ್ಯಾಚ್‌ ಹಿಡಿದ ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ಗೆ ಟ್ವಿಟರ್‌ ನಲ್ಲಿ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ.
ಬೆನ್ ಸ್ಟೋಕ್ಸ್ ಕ್ಯಾಚ್ ಹಿಡಿದ ಪರಿ
ಬೆನ್ ಸ್ಟೋಕ್ಸ್ ಕ್ಯಾಚ್ ಹಿಡಿದ ಪರಿ
ನಾಟಿಂಗ್‌ಹ್ಯಾಮ್‌: ಗುರುವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್‌ ಸಮೀಪ ಅಧ್ಬುತ ಕ್ಯಾಚ್‌ ಹಿಡಿದ ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ಗೆ  ಟ್ವಿಟರ್‌ ನಲ್ಲಿ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ. 
ಈ ಪಂದ್ಯದಲ್ಲಿ ಇಂಗ್ಲೆಂಡ್‌ 104 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಆದರೆ, ಈ ಪಂದ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದು, ಬೆನ್‌ ಸ್ಟೋಕ್ಸ್‌ ಹಿಡಿದ ಕ್ಯಾಚ್‌! ಆದಿಲ್‌ ರಶೀದ್‌ ಬೌಲಿಂಗ್ ನಲ್ಲಿ ಆಫ್ರಿಕಾದ ಆ್ಯಂಡಿಲೆ ಫೆಹ್ಲುಕ್ವಾಯೊ ಅವರು ಸ್ವೀಪ್‌ ಸ್ಲಾಗ್‌ ಶಾಟ್ ಹೊಡೆದರು. ಈ ವೇಳೆ ಚೆಂಡು ವೇಗವಾಗಿ ಬೌಂಡರಿ ಲೈನ್‌ ಸಮೀಪ ಹೋಗುತ್ತಿತ್ತು. ಅಲ್ಲೇ ಇದ್ದ ಬೆನ್ ಸ್ಟೋಕ್ಸ್‌ ಗಾಳಿಯಲ್ಲಿ ಹಾರಿ ಒಂದೇ ಕೈಯನ್ನು ಚಾಚಿ ಹಿಡಿದ ಕ್ಯಾಚ್‌ ನೋಡಲು ಅದ್ಭುತವಾಗಿತ್ತು. ಇದು ಪಂದ್ಯದ ಪ್ರಮುಖ ಆಕರ್ಷಣೆಯಾಗಿತ್ತು. 
ಈ ಬಗ್ಗೆ ಐಸಿಸಿ "ಈ ರೀತಿಯ ಕ್ಯಾಚ್‌ ಹಿಂದೆಂದೂ ನೋಡಿರಲು ಸಾಧ್ಯವಿಲ್ಲ" ಎಂದು ಟ್ವಿಟ್‌ ಮಾಡಿದೆ. ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. " ಟೂರ್ನಿಯ ಅತ್ಯುತ್ತಮ ಕ್ಯಾಚ್‌.." ಎಂದು ಟ್ವಿಟ್‌ ಮಾಡಿದ್ದಾರೆ.
ಈ ಕುರಿತು ಶ್ರೀಲಂಕಾ ಮಾಜಿ ಆಟಗಾರ ರಸೆಲ್‌ ಅರ್ನಾಲ್ಡ್‌ ಪ್ರತಿಕ್ರಿಯಿಸಿ "ವಾವ್ಹ್‌...ಬೆನ್‌ ಸ್ಟೋಕ್ಸ್‌ ಬಗ್ಗೆ ಏನು ಹೇಳಬೇಕು...ಎಂಥಾ ಕ್ಯಾಚ್‌!!! ಈ ರೀತಿಯ ಕ್ಯಾಚ್‌ ಹಿಡಿಯಲು ಅಭ್ಯಾಸ ಮಾಡಲು ಸಾಧ್ಯವೇ ಇಲ್ಲ. ಇಂಥ ಅದ್ಭುತ ಕ್ಯಾಚ್‌ ಎಂದಿಗೂ ನೋಡಲು ಸಾಧ್ಯವಿಲ್ಲ." ಎಂದು ಟ್ವಿಟ್‌ ಮಾಡಿದ್ದಾರೆ. ವೀಕ್ಷಕ ವಿವರಣೆಕಾರ ಹರ್ಷ್‌ ಬೋಗ್ಲೆ, " ಐಸಿಸಿ ವಿಶ್ವಕಪ್‌ ಮೊದಲನೇ ದಿನ  ಹಾಗೂ ಟೂರ್ನಿಯ ಅತ್ಯುತ್ತಮ ಕ್ಯಾಚ್‌ ಅನ್ನು ನೋಡಿದೆವು" ಎಂದು ಟ್ವಿಟ್‌ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com