ವಾಯುಮಾಲಿನ್ಯವಿದೆ, ಆದರೆ ನಾವು ಆಡಲೇಬೇಕು: ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವಿದೆಯಾದರೂ, ನಾವು ಕ್ರಿಕೆಟ್ ಆಡಲೇಬೇಕು ಎಂದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವಿದೆಯಾದರೂ, ನಾವು ಕ್ರಿಕೆಟ್ ಆಡಲೇಬೇಕು ಎಂದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ.

ಇದೇ ಭಾನುವಾರ ಪ್ರವಾಸಿ ಬ್ಲಾಂಗ್ಲಾದೇಶದ ವಿರುದ್ಧ ಭಾರತ ತಂಡ ಮೊದಲ ಟಿ20 ಪಂದ್ಯವನ್ನಾಡಲ್ಲಿದ್ದು, ದೆಹಲಿಯಲ್ಲಿ ಅಪಾಯದ ಮಟ್ಟ ಮೀರಿರುವ ವಾಯುಮಾಲಿನ್ಯ ಪಂದ್ಯಕ್ಕೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇದೆ. ಇಂದು ಸ್ವತಃ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸಿ ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಮತ್ತೆ ದೆಹಲಿಯಲ್ಲಿ ಟಿ20 ಪಂದ್ಯದ ಮೇಲೆ ಕರಿ ನೆರಳು ಬಿದ್ದಿದೆ. 

ಆದರೆ ಭಾನುವಾರದ ಪಂದ್ಯಕ್ಕೆ ವಾಯುಮಾಲಿನ್ಯದಿಂದ ಯಾವುದೇ ರೀತಿಯ ತೊಂದರೆಯಾಗದು ಎಂದು ಹೇಳಲಾಗುತ್ತಿದ್ದು, ಈ ಕುರಿತಂತೆ ಮಾತನಾಡಿರುವ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು, ದೆಹಲಿಯಲ್ಲಿ ವಾಯುಮಾಲಿನ್ಯವಿದೆಯಾದರೂ, ಪಂದ್ಯ ನಿಗದಿತ ವೇಳಾಪಟ್ಟಿಯಂತೆ ನಡೆಯಬೇಕು ಮತ್ತು ನಡೆಯಲಿದೆ ಕೂಡ. ನಾನು ನನ್ನ ವೃತ್ತಿ ಜೀವನವದ ಬಹುಪಾಲು ಉತ್ತರ ಭಾರತದಲ್ಲಿ ಕಳೆದಿದ್ದೇನೆ. ಇಲ್ಲಿನ ಹವಾಗುಣದ ಪರಿಚಯ ನನಗೆ ಚೆನ್ನಾಗಿ ಇದೆ. ಅ ಅನುಭವದ ಮೇಲೆ ಹೇಳುವುದಾದರೆ ಭಾನುವಾರದ ಪಂದ್ಯಕ್ಕೆ ವಾಯುಮಾಲಿನ್ಯದಿಂದ ಯಾವುದೇ ರೀತಿಯ ಧಕ್ಕೆಯಾಗಲಾರದು ಎಂದು ಹೇಳಿದ್ದಾರೆ.

ಅಂತೆಯೇ ಒಮ್ಮೆ ಆಟಗಾರರು ಪಂದ್ಯದ ಮೇಲೆ ನಿಗಾ ವಹಿಸಿದರೆ ಇನ್ನಾವುದೇ ವ್ಯತಿರಿಕ್ತ ಪರಿಸ್ಥಿತಿಗಳೂ ಸಮಸ್ಯೆ ಎನಿಸದು ಎಂದು ಹೇಳಿದ್ದಾರೆ.

ಟಿ-20 ಯಲ್ಲಿ ಇನ್ನಷ್ಟು ಬ್ಯಾಟಿಂಗ್ ಸುಧಾರಣೆ ಅಗತ್ಯ
ಇದೇ ವೇಳೆ ಭಾರತ ತಂಡದ ಬ್ಯಾಟಿಂಗ್ ಕುರಿತು ಮಾತನಾಡಿದ ಅವರು, 'ಟಿ-20 ವಿಶ್ವಕಪ್ ಟೂರ್ನಿಗೆ ಇನ್ನು ಒಂದು ವರ್ಷ ಬಾಕಿಯಿದ್ದು ಅಷ್ಟರೊಳಗೆ ತಂಡದ ಬ್ಯಾಟಿಂಗ್ ಲೈನ್ ಅಪ್ ಇನ್ನಷ್ಟು ಬಲಿಷ್ಟಗೊಳಿಸುವ ಅಗತ್ಯವಿದೆ. ಚುಟುಕು ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗುರಿ ಹಿಂಬಾಲಿಸುವಲ್ಲಿ ಬಲಿಷ್ಟವಾಗಿದೆ. ಇದರಲ್ಲಿ ಸಂಶಯವಿಲ್ಲ. ಅದೇ ರೀತಿ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಗುರಿ ನೀಡುವಷ್ಟು ಬ್ಯಾಟಿಂಗ್ ಇನ್ನಷ್ಟು ಬೆಳವಣಿಗೆ ಸಾಧಿಸಬೇಕು. ಸಾಮಾನ್ಯವಾಗಿ ವಿಭಿನ್ನ ಆಟಗಾರರು ಹಾಗೂ ಜೊತೆಯಾಟಗಳ ಮೇಲೆ ಪ್ರಯತ್ನ ನಡೆಸಬೇಕು. ಕಳೆದ ಸರಣಿಯಲ್ಲಿ ಬ್ಯಾಟಿಂಗ್ ಮೊದಲು ಮಾಡಿದ ಪಂದ್ಯದಲ್ಲಿ ಸೋಲು ಅನುಭವಿಸಿದ್ದೆವು. ಆ ಒಂದು ಜಾಗದ ಬೆಳವಣಿಗೆಗೆ ಹೆಚ್ಚು ಗಮನ ನೀಡಬೇಕಾಗಿದೆ’ ಎಂದರು. 

ಇನ್ನು ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ-ಸರಣಿ ಭಾನುವಾರ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com