'ದಿ ವಾಲ್' ಖ್ಯಾತಿಯ ದ್ರಾವಿಡ್ ದಾಖಲೆ ಸರಿಗಟ್ಟಿದ ರೋ'ಹಿಟ್' ಶರ್ಮಾ

ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌‌ಮನ್ ಆಗಿ ಬಡ್ತಿ ಪಡೆದ ಮೊದಲನೇ ಇನಿಂಗ್ಸ್‌‌ನಲ್ಲೇ ಹಿಟ್‌ಮನ್ ರೋಹಿತ್ ಶರ್ಮಾ 176 ರನ್ ಸಿಡಿಸಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ವಿಶಾಖಪಟ್ಟಣ: ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌‌ಮನ್ ಆಗಿ ಬಡ್ತಿ ಪಡೆದ ಮೊದಲನೇ ಇನಿಂಗ್ಸ್‌‌ನಲ್ಲೇ ಹಿಟ್‌ಮನ್ ರೋಹಿತ್ ಶರ್ಮಾ 176 ರನ್ ಸಿಡಿಸಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.  

ಅದರಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ ಹೆಚ್ಚು ಅರ್ಧ ಶತಕ ಸಿಡಿಸಿರುವ ಭಾರತ ತಂಡದ ಮಾಜಿ ನಾಯಕ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ರೋಹಿತ್ ಶರ್ಮಾ ಅವರು ಸರಿಗಟ್ಟಿದ್ದಾರೆ. 

1997 ಹಾಗೂ 1998ರ ನಡುವೆ ತವರು ನೆಲದಲ್ಲಿ ರಾಹುಲ್ ದ್ರಾವಿಡ್ ಅವರು ಸತತ ಆರು ಅರ್ಧ ಶತಕ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ ಸತತ ಆರು ಅರ್ಧ ಶತಕ ಸಿಡಿಸಿ ವಾಲ್ ದಾಖಲೆ ಸರಿಗಟ್ಟಿದ್ದಾರೆ.

ಕೆಂಪು ಚೆಂಡಿನ ಮಾದರಿಯಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ವೈಖರಿ ಹಾಗೂ ಅವರ ತಂತ್ರಗಳ ಬಗ್ಗೆ ಹಲವರು ಟೀಕಿಸಿದ್ದರು. ಆದರೆ, ಹರಿಣಗಳ ವಿರುದ್ಧದ ಮೊದಲನೇ ಪಂದ್ಯದ ಪ್ರಥಮ ಇನಿಂಗ್ಸ್‌ ನಲ್ಲಿಯೇ ತಮ್ಮ ಬ್ಯಾಟ್ ಮೂಲಕ ಎಲ್ಲ ಪ್ರಶ್ನೆಗಳಿಗೂ ದಿಟ್ಟ ಉತ್ತರ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com