ಮಹಿಳಾ ಕ್ರಿಕೆಟ್: ಪೂನಿಯಾ ಭರ್ಜರಿ ಬ್ಯಾಟಿಂಗ್, ದ.ಆಫ್ರಿಕಾ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ

ಭರವಸೆಯ ಬೌಲರ್ ಜೂಲನ್ ಗೋಸ್ವಾಮಿ (33ಕ್ಕೆ 3) ಹಾಗೂ ಪ್ರಿಯಾ ಪೂನಿಯಾ (ಅಜೇಯ 75) ಅವರ ಭರ್ಜರಿ ಪ್ರದರ್ಶನದ ಬಲದಿಂದ ಭಾರತ ಮಹಿಳಾ ತಂಡ ಮೊದಲ ಏಕದಿನ ಕ್ರಿಕೆಟ್ ತಂಡದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿತು.
ಪ್ರಿಯಾ ಪೂನಿಯಾ
ಪ್ರಿಯಾ ಪೂನಿಯಾ

ವಢೋಧರ:  ಭರವಸೆಯ ಬೌಲರ್ ಜೂಲನ್ ಗೋಸ್ವಾಮಿ (33ಕ್ಕೆ 3) ಹಾಗೂ ಪ್ರಿಯಾ ಪೂನಿಯಾ (ಅಜೇಯ 75) ಅವರ ಭರ್ಜರಿ ಪ್ರದರ್ಶನದ ಬಲದಿಂದ ಭಾರತ ಮಹಿಳಾ ತಂಡ ಮೊದಲ ಏಕದಿನ ಕ್ರಿಕೆಟ್ ತಂಡದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿತು.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 45.1 ಓವರ್ ಗಳಲ್ಲಿ 164 ರನ್ ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ಭಾರತ 41.4 ಓವರ್ ಗಳಲ್ಲಿ 2 ವಿಕೆಟ್ ಗೆ 165 ರನ್ ಸೇರಿಸಿತು.

ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಭರ್ಜರಿಯಾಗಿತ್ತು. ಪೂನಿಯಾ ಹಾಗೂ ಜೇಮಿಮಾ ರೊಡ್ರಿಗಸ್ ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಈ ಜೋಡಿ 20.4 ಓವರ್ ನಲ್ಲಿ 83 ರನ್ ಸೇರಿಸಿ ಔಟ್ ಆಯಿತು. ಜೇಮಿಮಾ 65 ಎಸೆತಗಳಲ್ಲಿ 7 ಬೌಂಡರಿ ಸೇರಿದಂತೆ 55 ರನ್ ಬಾರಿಸಿ ಔಟ್ ಆದರು.

ಪೂನಮ್ ರಾವತ್ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆರಂಭಿಕ ಪ್ರಿಯಾ ಪೂನಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 124 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 75 ರನ್ ಬಾರಿಸಿ ಅಜೇಯರಾಗುಳಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಎಡವಿದರು. ಜೂಲನ್ ಗೋಸ್ವಾಮಿ 33 ರನ್ ಗೆ ಮೂರು ವಿಕೆಟ್ ಪಡೆದರು. ಶಿಖಾ ಪಾಂಡೆ, ಏಕ್ತಾ ಬಿಷ್ಟ್ ಹಾಗೂ ಪೂನಮ್ ಯಾದವ್ ತಲಾ ಎರಡು ವಿಕೆಟ್ ಕಬಳಿಸಿದರು. ದಕ್ಷಿಣ ಆಫ್ರಿಕಾ ಪರ ಲಾರಾ ವೊಲ್ವಾರ್ಡ್ (39), ಸುನೆ ಲೂಸ್ (22) ರನ್ ಕಲೆ ಹಾಕಿದರು. ಉಳಿದಂತೆ ಮಾರಿಜನ್ನೆ ಕಾಪ್ 64 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 54 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com