ಎಂಎಸ್ ಧೋನಿಯನ್ನು ಅನುಕರಿಸಿದ ರೋಹಿತ್ ಶರ್ಮಾ, ವೃತ್ತಿಜೀವನದ 6ನೇ ಶತಕ ಪೂರೈಸಿದ ಹಿಟ್‍ಮ್ಯಾನ್

ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ವೃತ್ತಿ ಜೀವನದ ಆರನೇ ಶತಕ ಪೂರೈಸಿದರು.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ರಾಂಚಿ:  ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ವೃತ್ತಿ ಜೀವನದ ಆರನೇ ಶತಕ ಪೂರೈಸಿದರು.

ಇಲ್ಲಿನ ಜೆಎಸ್‍ಸಿಎ ಕ್ರೀಡಾಂಗಣದಲ್ಲಿ ಭಾರತ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್‍ಗಳನ್ನು ಕಳೆದುಕೊಂಡಿತು. ಆದರೆ, ಒಂದು ತುದಿಯಲ್ಲಿ ನೆಲೆಯೂರಿದ ಹಿಟ್‍ಮನ್ ದಕ್ಷಿಣ ಆಫ್ರಿಕಾ ಬೌಲರ್‍ಗಳನ್ನು ಸೆದೆ ಬಡಿದರು. 

132 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 101 ರನ್ ಗಳಿಸಿ ವೃತ್ತಿ ಜೀವನದ ಆರನೇ ಹಾಗೂ ಆರಂಭಿಕನಾಗಿ ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳು ಸಿಡಿಸಿದ ನಾಲ್ಕನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಅಗ್ರ ಮೂರು ಸ್ಥಾನಗಳಲ್ಲಿ ಸುನೀಲ್ ಗವಾಸ್ಕರ್ ಇದ್ದಾರೆ. ಅಲ್ಲದೇ, ಒಂದೇ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕರಿಂದ ಐದು ಶತಕಗಳು ದಾಖಲಾದವು.

ರೋಹಿತ್ ಶರ್ಮಾ ಮಾಜಿ ನಾಯಕರಾದ ಎಂ.ಎಸ್. ಧೋನಿ ಮತ್ತು ಎಂ.ಎ.ಕೆ ಪಟೌಡಿ  ಅವರಂತೆಯೇ ಆರನೇ ಟೆಸ್ಟ್ ಶತಕ ಗಳಿಸಿದ್ದಾರೆ. ಧೋನಿ  90 ಟೆಸ್ಟ್ ಪಂದ್ಯಗಳಲ್ಲಿ 6 ಶತಕಗಳನ್ನು ಗಳಿಸಿದ್ದರೆ, ರೋಹಿತ್ ಶರ್ಮಾ ಕೇವಲ 30ನೇ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ಆರಂಭಿಕನಾಗಿ ಬಡ್ತಿ ಪಡೆದ ಮೊದಲನೇ ಸರಣಿಯಲ್ಲೇ ತಾನೆಂದೂ ನಿರೂಪಿಸಿದ ರೋಹಿತ್ ಶರ್ಮಾ ಟೆಸ್ಟ್ ವೃತ್ತಿ ಜೀವನದಲ್ಲಿ 2,000 ರನ್ ಪೂರ್ಣಗೊಳಿಸಿದರು. ಒಟ್ಟಾರೆ, ಭಾರತ 46 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದೆ.

ರೋಹಿತ್ ಶರ್ಮಾ (101) ಹಾಗೂ ಅಜಿಂಕ್ಯಾ ರಹಾನೆ (60) ಕ್ರೀಸ್‍ನಲ್ಲಿ ಉಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com