ಭಾರತ ವರ್ಸಸ್ ವೆಸ್ಟ್ ಇಂಡೀಸ್: ಮತ್ತೆ ಸಂಕಷ್ಟದಲ್ಲಿ ವಿಂಡೀಸ್, ಮೊದಲ ಇನ್ನಿಂಗ್ಸ್ ಭಾರಿ ಮುನ್ನಡೆಯತ್ತ ಟೀಂ ಇಂಡಿಯಾ
ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿರುವ ವಿಂಡೀಸ್ ಪಡೆ, ಬುಮ್ರಾ ಗೆ ಆರು ವಿಕೆಟ್
ಜಮೈಕಾ: ಭಾರತದ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಹಿನ್ನಡೆಯತ್ತ ಸಾಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ 416 ರನ್ ಗಳನ್ನು ಬೆನ್ನುಹತ್ತಿದೆ ವಿಂಡೀಸ್ ತಂಡ ಜಸ್ ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ತತ್ತರಿಸಿ ಹೋಗಿದ್ದು, ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದೆ. ಆರಂಭದಿಂದಲೂ ವಿಂಡೀಸ್ ದಾಂಡಿಗರನ್ನು ಕಾಡಿದ ಬುಮ್ರಾ ವಿಂಡೀಸ್ ದಾಂಡಿಗರು ಪೆಲಿಯನ್ ಪರೇಡ್ ನಡೆಸುವಂತೆ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಹೇಟ್ಮರ್ ಗಳಿಸಿದ 34 ರನ್ ಗಳ ವಿಂಡೀಸ್ ತಂಡದ ವೈಯುಕ್ತಿಕ ಗರಿಷ್ಠ ಮೊತ್ತವಾಗಿದ್ದು, ಇಬ್ಬರು ಆಟಗಾರರು ಶೂನ್ಯಕ್ಕೆ ಔಟ್ ಆದರೆ, ಮೂರು ಮಂದಿ ಆಟಗಾರರು ಎರಡಂಕಿ ಕೂಡ ದಾಟಿಲ್ಲ.
ಕೇವಲ 22 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ವಿಂಡೀಸ್ ಪಡೆಗೆ ಶಮಿ ಆಘಾತ ನೀಡಿದರು. 34 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಹೇಟ್ಮರ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಬಳಿಕ ಬುಮ್ರಾ ಬೌಲಿಂಗ್ ನಲ್ಲಿ ಹೋಲ್ಡರ್ ಔಟ್ ಆದರು. ದಿನದಾಟದ ಅಂತ್ಯಕ್ಕೆ ವಿಂಡೀಸ್ ತಂಡ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದು, 2 ರನ್ ಗಳಿಸಿರುವ ಹ್ಯಾಮಿಲ್ಟನ್ ಮತ್ತು 4 ರನ್ ಗಳಿಸಿರುವ ಕಾರ್ನ್ ವಾಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನು ಭಾರತದ ಬರ ಮಾರಕ ಬೌಲಿಂಗ್ ದಾಳಿ ನಡೆಸಿದ ಬುಮ್ರಾ 6 ವಿಕೆಟ್ ಪಡೆದಿದ್ದು, ಶಮಿ 1 ವಿಕೆಟ್ ಪಡೆದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ