ಇತಿಹಾಸ ಬರೆದಿರುವ ಥಾಯ್ಲೆಂಡ್‌, ಮಹಿಳಾ ಐಸಿಸಿ ಟಿ-20 ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆ

ಬಾಂಗ್ಲಾದೇಶ ಹಾಗೂ ಥಾಯ್ಲೆಂಡ್‌ ತಂಡಗಳು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದ ಬಳಿಕ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ ಭಾನುವಾರ ಬಿಡುಗಡೆ ಮಾಡಲಾಯಿತು.
ಥಾಯ್ಲೆಂಡ್ ತಂಡ
ಥಾಯ್ಲೆಂಡ್ ತಂಡ

ದುಬೈ: ಬಾಂಗ್ಲಾದೇಶ ಹಾಗೂ ಥಾಯ್ಲೆಂಡ್‌ ತಂಡಗಳು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದ ಬಳಿಕ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ ಭಾನುವಾರ ಬಿಡುಗಡೆ ಮಾಡಲಾಯಿತು.

ಸ್ಕಾಟ್‌ಲೆಂಡ್‌ನಲ್ಲಿ ಬಾಂಗ್ಲಾದೇಶ ವನಿತೆಯರ ತಂಡ ಅಮೋಘ ಪ್ರದರ್ಶನ ತೋರಿದೆ. ಈ ಹಿನ್ನೆಲೆಯಲ್ಲಿ ಆ್ಯಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್‌ ಹಾಗೂ ಶ್ರೀಲಂಕಾ ತಂಡಗಳ ಒಳಗೊಂಡಿರುವ ಗುಂಪು 'ಎ' ನಲ್ಲಿ ಸ್ಥಾನ ಪಡೆದಿದೆ.

12 ವರ್ಷಗಳ ಬಳಿಕ ಮೊದಲ ಬಾರಿ ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ಬರೆದಿರುವ ಥಾಯ್ಲೆಂಡ್‌ ತಂಡ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಹಾಗೂ ಪಾಕಿಸ್ತಾನಗಳ ವಿರುದ್ಧ ಥಾಯ್ಲೆಂಡ್‌ ಕಠಿಣ ಹೋರಾಟ ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com