ವಿರಾಟ್ ಕೊಹ್ಲಿ ಖಾಲಿ ಕ್ರೀಡಾಂಗಣಕ್ಕೆ ಹೇಗೆ ಹೊಂದಿಕೊಳ್ಳುತ್ತಾರೋ: ನಾಥನ್ ಲಿಯಾನ್ ಗೇಲಿ

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭಾರತ ಕ್ರಿಕೆಟ್ ಪ್ರೇಮಿಗಳೆ ಸ್ಫೂರ್ತಿ. ಕ್ರೀಡಾಂಗಣದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಸೇರುವ ಅಭಿಮಾನಿಗಳ ಘೋಷಣೆಗಳು ಬಲ ತುಂಬುತ್ತವೆ. ಹೀಗಿರುವಾಗ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ನಡುವೆ ನಡೆಯುವ ಸರಣಿ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಾಲಿ ಕ್ರೀಡಾಂಗಣಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ.
ನಾಥನ್-ಕೊಹ್ಲಿ
ನಾಥನ್-ಕೊಹ್ಲಿ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭಾರತ ಕ್ರಿಕೆಟ್ ಪ್ರೇಮಿಗಳೆ ಸ್ಫೂರ್ತಿ. ಕ್ರೀಡಾಂಗಣದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಸೇರುವ ಅಭಿಮಾನಿಗಳ ಘೋಷಣೆಗಳು ಬಲ ತುಂಬುತ್ತವೆ. ಹೀಗಿರುವಾಗ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ನಡುವೆ ನಡೆಯುವ ಸರಣಿ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಾಲಿ ಕ್ರೀಡಾಂಗಣಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರು ಯೋಚಿಸುತ್ತಿದ್ದಾರೆ. 

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಕ್ರಿಕೆಟ್ ಟೂರ್ನಿಗಳು ಸ್ಥಗಿತಗೊಂಡಿವೆ. ಇಗಿದ್ದರೂ ಡಿಸೆಂಬರ್ ನಲ್ಲಿ ಒಂದು ಪಕ್ಷ ಕ್ರಿಕೆಟ್ ಟೂರ್ನಿಗಳು ನಡೆದರೂ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬರುವುದು ಡೌಟ್. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ಬೌಲರ್ ನಾಥನ್ ಲಿಯಾನ್ ವಿರಾಟ್ ಕೊಹ್ಲಿ ಕುರಿತು ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಯಾವುದೇ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದ್ದು ಎಂದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸೂಪರ್ ಸ್ಟಾರ್ ಆಟಗಾರ. ಅವರು ಯಾವುದೇ ಹವಮಾನಕ್ಕೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ ಎಂದು ಲಿಯಾನ್ ಹೇಳಿದ್ದಾರೆ.

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ನಿರೀಕ್ಷೆಯ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ಆಶಸ್ ಜೊತೆಗೆ ಇದು ಸಹ ಅತಿದೊಡ್ಡ ಸರಣಿ ಎಂದು ನಾಥನ್ ಹೇಳಿದ್ದಾರೆ. 

ನಾವು ಜನಸಂದಣಿ ಇರಲಿ ಅಥವಾ ಇಲ್ಲದಿರಲಿ ಎಂಬ ಬಗ್ಗೆ ಯೋಚಿಸಿಲ್ಲ. ಆದರೆ ಬಲಿಷ್ಠ ತಂಡ ಭಾರತದ ವಿರುದ್ಧ ಆಡುವ ಅವಕಾಶದ ಬಗ್ಗೆ ಮಾತ್ರ ಯೋಚಿಸುತ್ತಿರುವುದಾಗಿ ನಾಥನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com