ಆಡಿಲೇಡ್ ಟೆಸ್ಟ್: ಮೊದಲ ದಿನ ಆಸ್ಟ್ರೇಲಿಯಾ ಪ್ರಾಬಲ್ಯ, ಭಾರತ 233/6; ವಿರಾಟ್ ಅರ್ಧಶತಕ

ನಾಯಕ ವಿರಾಟ್ ಕೊಹ್ಲಿ ಯ(74)  ಜವಾಬ್ದಾರಿಯುತ ಬ್ಯಾಟಿಂಗ್ ಹೊರತಾಗಿಯೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡ ವಿರುದ್ಧ ಸಾಧಾರಣ ಮೊತ್ತ ಕಲೆ ಹಾಕಿದ್ದು, ಆತಿಥೇಯ ತಂಡ ಮೊದಲ ದಿನ ಮೇಲುಗೈ ಸಾಧಿಸಿದೆ. 
ವಿರಾಟ್ ಕೊಹ್ಲಿ ಬ್ಯಾಟಿಂಗ್ ಚಿತ್ರ
ವಿರಾಟ್ ಕೊಹ್ಲಿ ಬ್ಯಾಟಿಂಗ್ ಚಿತ್ರ

ಆಡಿಲೇಡ್ : ನಾಯಕ ವಿರಾಟ್ ಕೊಹ್ಲಿ ಯ(74)  ಜವಾಬ್ದಾರಿಯುತ ಬ್ಯಾಟಿಂಗ್ ಹೊರತಾಗಿಯೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡ ವಿರುದ್ಧ ಸಾಧಾರಣ ಮೊತ್ತ ಕಲೆ ಹಾಕಿದ್ದು, ಆತಿಥೇಯ ತಂಡ ಮೊದಲ ದಿನ ಮೇಲುಗೈ ಸಾಧಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ದಿನದಾಟದ ಅಂತ್ಯಕ್ಕೆ  ಆರು ವಿಕೆಟ್ ಗೆ 233 ರನ್ ಸೇರಿಸಿದೆ. ವೃದ್ಧಿಮನ್ ಸಹಾ (9), ರವಿಚಂದ್ರನ್ ಅಶ್ವಿನ್ (15) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ಈ ಜೋಡಿ ಶುಕ್ರವಾರ ನಡೆಯುವ ಮೊದಲಾವಧಿಯಲ್ಲಿ ಎಚ್ಚರಿಯ ಬ್ಯಾಟಿಂಗ್ ನಡೆಸಿ, ತಂಡದ ಮೊತ್ತ ಹೆಚ್ಚಿಸುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಭಾರತ ಉತ್ತಮ ಮೊತ್ತದ ಕನಸು ನನಸಾಗುತ್ತದೆ. 

ಟಾಸ್ ಗೆದ್ದ ಭಾರತದ ನಾಯಕ ವಿರಾಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಆರಂಭಿಕ ಪೃಥ್ವಿ ಶಾ ಪಂದ್ಯದ ಎರಡನೇ ಎಸೆತದಲ್ಲಿ ಔಟ್ ಆದರು. 

ಆರಂಭಿಕ ಆಘಾತದ ನಂತರ, ಮಾಯಾಂಕ್ ಅಗರ್ ವಾಲ್ ಅವರು ಪೂಜಾರ ಅವರೊಂದಿಗೆ ಇನ್ನಿಂಗ್ಸ್ ಅನ್ನು ಮುಂದುವರಿಸಲು ಪ್ರಯತ್ನಿಸಿದರು. ಮತ್ತು ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ ಎರಡನೇ ವಿಕೆಟ್‌ಗೆ 32 ರನ್‌ಗಳ ಜೊತೆಯಾಟ ನಡೆದೆತ್ತು. ಆದರೆ ಮಾಯಾಂಕ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪ್ಯಾಟ್ ಕಮ್ಮಿನ್ಸ್ ಎಸೆತವನ್ನು ಅರಿಯುವಲ್ಲಿ ಎಡವಿ ಬೋಲ್ಡ್ ಆದರು. ಮಾಯಾಂಕ್ 40 ಎಸೆತಗಳಲ್ಲಿ 17 ರನ್ ಗಳಿಸಿದರು.
 
68 ರನ್ ಜೊತೆಯಾಟ:ಮೂರನೇ ವಿಕೆಟ್ ಗೆ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ಈ ಜೋಡಿ ತಮ್ಮ ನೈಜ ಆಟ ಆಡಿ ರನ್ ಗಳನ್ನು ಕಲೆ ಹಾಕಿ ಅಬ್ಬರಿಸಿತು. ಕೆಟ್ಟ ಎಸೆತವನ್ನು ದಂಡಿಸುತ್ತಾ ಸಾಗಿದ ಜೋಡಿ ರನ್ ಮಹಲ್ ಕಟ್ಟುವ ಸೂಚನೆ ನೀಡಿತು. ಈ ಜೋಡಿ ಮೂರನೇ ವಿಕೆಟ್ ಗೆ 68 ರನ್ ಗಳ ಜೊತೆಯಾಟ ನೀಡಿತು.  ಚೇತೇಶ್ವರ್ ಪೂಜಾರ ನಾಥನ್ ಲಿಯಾನ್ ಅವರ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಲೆಗ್ ಗಲಿಯಲ್ಲಿ ನಿಂತಿದ್ದ ಲಾಂಬುಶೇನ್ ಗೆ ಕ್ಯಾಚ್ ನೀಡಿದರು. ಪೂಜಾರ 2 ಬೌಂಡರಿ ಸೇರಿದಂತೆ 43 ರನ್ ಸಿಡಿಸಿದರು. 

ನಾಲ್ಕನೇ ವಿಕೆಟ್ ಗೆ ನಾಯಕ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಿದರು. ಹಂತ ಹಂತವಾಗಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದ ಜೋಡಿ ತಂಡಕ್ಕೆ ನೆರವಾಯಿತು. ಈ ಜೋಡಿ 88 ರನ್ ಗಳ ಜೊತೆಯಾಟವನ್ನು ನೀಡಿ ಮುನ್ನುಗುತ್ತಿದ್ದಾಗ ಎಡವಿತು. ರಹಾನೆ ಮಿಡ್ ಆಫ್ ನತ್ತ ಚೆಂಡನ್ನು ತಳ್ಳಿ ಒಂದು ರನ್ ಕದಿಯಲು ಮುಂದಾಗಿದ್ದರು. ವಿರಾಟ್ ಅದಾಗಲೇ ಕ್ರೀಸ್ ಬಿಟ್ಟು ಮುಂದೆ ಬಂದು ಬಿಟ್ಟಿದ್ದರು. ಹ್ಯಾಜಲ್ ವುಡ್ ಚೆಂಡನ್ನು ತಡೆದು ಲಿಯಾನ್ ಗೆ ನೀಡಿದರು. ಆಸೀಸ್ ಗೆ ಅವಶ್ಯಕತೆ ಇದ್ದ ವಿರಾಟ್ ಕೊಹ್ಲಿ ವಿಕೆಟ್ ಲಭಿಸಿತು. 

ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. 180 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 74 ರನ್ ಬಾರಿಸಿದ ವಿರಾಟ್ ಔಟ್ ಆದರು. ಅಜಿಂಕ್ಯ ರಹಾನೆ (42) ಸ್ಟಾರ್ಕ್‌ ಗೆ, ಹನುಮ ವಿಹಾರಿ (16) ಹ್ಯಾಜಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2, ಜೋಶ್ ಹ್ಯಾಜಲ್ ವುಡ್, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್ ತಲಾ ಒಂದು ವಿಕೆಟ್ ಪಡೆದರು. 
 
ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 6 ವಿಕೆಟ್ ಗೆ 233
(ಚೇತೇಶ್ವರ್ ಪೂಜಾರ 43, ವಿರಾಟ್ ಕೊಹ್ಲಿ 74, ಅಜಿಂಕ್ಯ ರಹಾನೆ 42, ಮಿಚೆಲ್ ಸ್ಟಾರ್ಕ್ 49ಕ್ಕೆ 2)
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com