ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಪೃಥ್ವಿ-ಮಯಾಂಕ್ ಜೋಡಿ

ಟೀಮ್ ಇಂಡಿಯಾದ ಯುವ ಆಟಗಾರರಾದ ಮುಂಬೈನ ಪೃಥ್ವಿ ಶಾ ಹಾಗೂ ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಪೃಥ್ವಿ-ಮಯಾಂಕ್ ಜೋಡಿ
ಪೃಥ್ವಿ-ಮಯಾಂಕ್ ಜೋಡಿ

ಹ್ಯಾಮಿಲ್ಟೋನ್: ಟೀಮ್ ಇಂಡಿಯಾದ ಯುವ ಆಟಗಾರರಾದ ಮುಂಬೈನ ಪೃಥ್ವಿ ಶಾ ಹಾಗೂ ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಯುವ ಆಟಗಾರರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು. ಭರವಸೆಯ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಈ ಉಭಯ ಆಟಗಾರರಿಗೆ ಅವಕಾಶ ಲಭಿಸಿತ್ತು. ನ್ಯೂಜಿಲ್ಯಾಂಡ್​ ವಿರುದ್ಧ ಇಂದಿನಿಂದ ಆರಂಭಗೊಂಡಿರುವ ಏಕದಿನ ಕ್ರಿಕೆಟ್​ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕನ್ನಡಿಗ ಮಯಾಂಕ್​ ಹಾಗೂ ಮುಂಬೈಕರ್​ ಪೃಥ್ವಿ ಶಾ ಡೆಬ್ಯು ಮಾಡಿದ್ದು, ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಈ ಮೂಲಕ ನಾಲ್ಕನೇ ಬಾರಿಗೆ ಭಾರತೀಯ ಆರಂಭಿಕರು ಒಂದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದಂತಾಗಿದೆ.

ಈ ಹಿಂದೆ 1974ರಲ್ಲಿ ಇಂಗ್ಲೆಂಡ್​ ವಿರುದ್ಧ ಸುನಿಲ್​ ಗವಾಸ್ಕರ್​  ಮತ್ತು ಸುಧೀರ್​ ನಾಯರ್​ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗರಾಗಿದ್ದರು. ಆ ಬಳಿಕ 1976ರಲ್ಲಿ ನ್ಯೂಜಿಲೆಂಡ್​ ವಿರುದ್ಧ ಪಾರ್ಥಸಾರಥಿ-ದಿಲಿಪ್​ ವೆಂಗ್​ಸರ್ಕಾರ್​​​ ಪದಾರ್ಪಣೆ ಪಂದ್ಯದಲ್ಲೇ ಆರಂಭಿಕರಾಗಿ ಕಣಕ್ಕಿಳಿದ 2ನೇ ಜೋಡಿ ಎನಿಸಿಕೊಂಡಿದ್ದರು. 2016ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕನ್ನಡಿಗ ಕೆಎಲ್​ ರಾಹುಲ್​ - ಕರುಣ್​ ನಾಯರ್​ ಪದಾರ್ಪಣೆ ಪಂದ್ಯದಲ್ಲೇ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಇದೀಗ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಪದಾರ್ಪಣೆ ಪಂದ್ಯದಲ್ಲೇ ಪೃಥ್ವಿ ಶಾ - ಮಯಾಂಕ್​​ ಅಗರವಾಲ್ ಜೋಡಿ ಆರಂಭಿಕರಾಗಿ ಕಣಕ್ಕಿಳಿಯುವ ಮೂಲಕ ಈ ಸಾಧನೆಗೈದ ಭಾರತದ 4ನೇ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಪದಾರ್ಪಣೆ ಪಂದ್ಯದಲ್ಲೇ ಈ ಜೋಡಿ 50 ರನ್ ಗಳ ಭರ್ಜರಿ ಜೊತೆಯಾಟ ಕೂಡ ಆಡಿ ಭರವಸೆ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com