ಫೈನಲ್ ಪಂದ್ಯದ ಬಳಿಕ ಆಟಗಾರರ ಗಲಾಟೆ
ಫೈನಲ್ ಪಂದ್ಯದ ಬಳಿಕ ಆಟಗಾರರ ಗಲಾಟೆ

ಅಂಡರ್ 19 ವಿಶ್ವಕಪ್ ಫೈನಲ್ ಬಳಿಕ ವಾಗ್ವಾದ: ಬಾಂಗ್ಲಾದ 3, ಭಾರತದ 2 ಆಟಗಾರರ ವಿರುದ್ಧ ಐಸಿಸಿ ಶಿಸ್ತು ಕ್ರಮ

ಕಳೆದ ಭಾನುವಾರ 19 ವಯೋಮಿತಿ ವಿಶ್ವಕಪ್ ಫೈನಲ್ ಬಳಿಕ ಉಭಯ ತಂಡಗಳ ನಡುವೆ ನಡೆದಿದ್ದ ವಾಗ್ವಾದದ ಪ್ರಕರಣ ಸಂಬಂಧ ಬಾಂಗ್ಲಾದೇಶದಿಂದ ಮೂವರು ಮತ್ತು ಭಾರತದಿಂದ ಇಬ್ಬರು ಸೇರಿ ಒಟ್ಟು ಐವರು ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶಿಸ್ತುಕ್ರಮ ಜರುಗಿಸಿದೆ.

ದುಬೈ: ಕಳೆದ ಭಾನುವಾರ 19 ವಯೋಮಿತಿ ವಿಶ್ವಕಪ್ ಫೈನಲ್ ಬಳಿಕ ಉಭಯ ತಂಡಗಳ ನಡುವೆ ನಡೆದಿದ್ದ ವಾಗ್ವಾದದ ಪ್ರಕರಣ ಸಂಬಂಧ ಬಾಂಗ್ಲಾದೇಶದಿಂದ ಮೂವರು ಮತ್ತು ಭಾರತದಿಂದ ಇಬ್ಬರು ಸೇರಿ ಒಟ್ಟು ಐವರು ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶಿಸ್ತುಕ್ರಮ ಜರುಗಿಸಿದೆ.

ಫೈನಲ್ ಹಣಾಹಣಿಯಲ್ಲಿ ಪ್ರಿಯಮ್ ಗರ್ಗ್ ನಾಯಕತ್ವದ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ ಮೂರು ವಿಕೆಟ್‌ಗಳಿಂದ(ಡಿಎಲ್‌ಎಸ್ ಮೂಲಕ) ಸೋಲು ಅನುಭವಿಸಿತ್ತು. ಚೊಚ್ಚಲ ವಿಶ್ವಕಪ್ ಜಯಸಿದ ಸಂಭ್ರಮದಲ್ಲಿ ಬಾಂಗ್ಲಾ ಆಟಗಾರರು ಅತಿರೇಕದ ವರ್ತನೆ ಭಾರತದ ಆಟಗಾರರನ್ನು ಕೆರಳಿಸಿತ್ತು. ಈ ವೇಳೆ ಉಭಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ-ಕೈ ಮಿಲಾಯಿಸುವಷ್ಟರ ಮಟ್ಟಿಗೆ ಘಟನೆ ತಾರಕಕ್ಕೇರಿತ್ತು. ಈ ವೇಳೆ ತೀರ್ಪುಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಸರಿದೂಗಿಸಿದ್ದರು.

ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಬಾಂಗ್ಲಾದೇಶದ ಆಟಗಾರರಾದ ತೌಹಿದ್ ವೃದಾಯ್, ಶಮೀಮ್ ಹೊಸೈನ್ ಮತ್ತು ರಕಿಬುಲ್ ಹಸನ್ ಅವರಿಗೆ ಆರು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗಿದೆ ಮತ್ತು ಐಸಿಸಿ ನೀತಿ ಸಂಹಿತೆಯ ಮೂರನೇ ಹಂತದ ಉಲ್ಲಂಘನೆಗೆ ಗುರಿಯಾಗಿದೆ ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಮೆರಿಟ್ ಪಾಯಿಂಟ್ ಎಂದರೇನು?
ಯಾವುದೇ ಆಟಗಾರ ಐಸಿಸಿ ನಿಯಮವಾಳಿ ದಾಟಿ ಎದುರಾಳಿ ತಂಡ ಹಾಗೂ ಆಟಗಾರರ ವಿರುದ್ಧ ಅಸಭ್ಯವಾಗಿ ವರ್ತನೆ, ನಿಂದನೆ ಮಾಡಿದರೆ ಆಗ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಒಬ್ಬ ಆಟಗಾರ 24 ತಿಂಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‍ಗಳನ್ನು ಹೊಂದಿದ್ದರೆ ಆ ಆಟಗಾರ ಕ್ರಿಕೆಟ್ ನಿರ್ಬಂಧಕ್ಕೆ ತುತ್ತಾಗುತ್ತಾನೆ. ಅಷ್ಟೇ ಅಲ್ಲದೆ ಎರಡು ಡಿಮೆರಿಟ್ ಪಾಯಿಂಟ್ ಪಡೆದರೆ ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯ ಅಥವಾ ಎರಡು ಟಿ20 ಪಂದ್ಯಗಳಿಗೆ ನಿಷೇಧಕ್ಕೆ ಒಳಗಾಗುತ್ತಾನೆ.

Related Stories

No stories found.

Advertisement

X
Kannada Prabha
www.kannadaprabha.com