ಸಚಿನ್ ಅವರ ಶಾರ್ಜಾ ಸಿಡಿಲಬ್ಬರದ ಆಟವನ್ನು ಆಡಬೇಕೆಂಬ ಆಸೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ!

ಭಾರತೀಯ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲಾರದ, ಶಾರ್ಜಾದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಿಡಿಲಬ್ಬರದ ಬ್ಯಾಟಿಂಗನ್ನು ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ.
ಸಚಿನ್ ಅವರ ಶಾರ್ಜಾ ಸಿಡಿಲಬ್ಬರದ ಆಟವನ್ನು ಆಡಬೇಕೆಂಬ ಆಸೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ!
ಸಚಿನ್ ಅವರ ಶಾರ್ಜಾ ಸಿಡಿಲಬ್ಬರದ ಆಟವನ್ನು ಆಡಬೇಕೆಂಬ ಆಸೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ!
Updated on: 

ಭಾರತೀಯ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲಾರದ, ಶಾರ್ಜಾದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಿಡಿಲಬ್ಬರದ ಬ್ಯಾಟಿಂಗನ್ನು ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ.

ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆಟ್ರಿ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ನಡೆಸಿದ ಚರ್ಚೆಯಲ್ಲಿ ವಿರಾಟ್ ಕೊಹ್ಲಿಗೆ ಛೆಟ್ರಿ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದರು ಈ ಪೈಕಿ ಸಚಿನ್ ಅವರ ವಿಷಯವನ್ನೂ ಪ್ರಸ್ತಾಪಿಸಲಾಯಿತು. ನೀವು ಆಡಿರಬೇಕಿತ್ತೆಂಬ ಎನಿಸಿದ್ದ ಅಂತಾರಾಷ್ಟ್ರೀಯ ಪಂದ್ಯ ಯಾವುದು ಎಂಬ ಛೆಟ್ರಿ ಪ್ರಶ್ನೆಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಆಡಿದ್ದ ಸ್ಫೋಟಕ ಪಂದ್ಯ ಎಂದು ಹೇಳ್ದಿದಾರೆ.   

22 ವರ್ಷಗಳ ಶಾರ್ಜಾದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಆಡಿದ್ದ ತೆಂಡೂಲ್ಕರ್ 131 ಎಸೆತಗಳಿಗೆ 143 ರನ್ ಗಳನ್ನು ಗಳಿಸಿ  ಎಲ್ಲಾ ಸಂಕಷ್ಟಗಳ ನಡುವೆಯೂ ಏಕಾಂಗಿಯಾಗಿ ಭಾರತವನ್ನು ಕೋಕಾ-ಕೋಲಾ ಕಪ್ ಫೈನಲ್ಸ್ ಗೆ ತಲುಪುವಂತೆ ಮಾಡಿದ್ದರು.  

ಇದೇ ವೇಳೆ ತೆಂಡೂಲ್ಕರ್ ಬ್ಯಾಟಿಂಗ್ ನ ಯಾವ ಭಂಗಿ ಇಷ್ಟ ಎಂಬ ಪ್ರಶ್ನೆಗೂ ಉತ್ತರಿಸಿರುವ ಕೊಹ್ಲಿ, ಲ್ಯಾಪ್ ಶಾಟ್ ಎಂಬ ಉತ್ತರ ನೀಡಿದ್ದಾರೆ. ಸಚಿನ್ ಎಂದಿಗೂ ಲ್ಯಾಪ್ ಶಾಟ್ ನ್ನು ತಪ್ಪಿಸುತ್ತಿರಲಿಲ್ಲ. ನಾನು ಎಂದಿಗೂ ಆ ಭಂಗಿಯಲ್ಲಿ ಬ್ಯಾಟ್ ಬೀಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com