ನನ್ನ ಆಯ್ಕೆಗಾಗಿ ತಂದೆ ಲಂಚ ನೀಡಲು ನಿರಾಕರಿಸಿದಾಗ ನಾನು ಕಣ್ಣೀರಿಟ್ಟಿದ್ದೆ: ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ನಡೆದ ಲಂಚಾವತಾರವನ್ನು ಬಿಚ್ಚಿಟ್ಟಿದ್ದು, ದೆಹಲಿ ಜೂನಿಯರ್ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡಲು ಅಧಿಕಾರಿಯೊಬ್ಬರು ಲಂಚ ಕೇಳಿದ್ದರು. ಆದರೆ ನನ್ನ ತಂದೆ ಲಂಚ ನೀಡಲು ನಿರಾಕರಿಸಿದ್ದರಿಂದ ನಾನು ಅಂದು ಕಣ್ಣೀರಿಟ್ಟಿದ್ದೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ನಡೆದ ಲಂಚಾವತಾರವನ್ನು ಬಿಚ್ಚಿಟ್ಟಿದ್ದು, ದೆಹಲಿ ಜೂನಿಯರ್ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡಲು ಅಧಿಕಾರಿಯೊಬ್ಬರು ಲಂಚ ಕೇಳಿದ್ದರು. ಆದರೆ ನನ್ನ ತಂದೆ ಲಂಚ ನೀಡಲು ನಿರಾಕರಿಸಿದ್ದರಿಂದ ನಾನು ಅಂದು ಕಣ್ಣೀರಿಟ್ಟಿದ್ದೆ ಎಂದು ಹೇಳಿದ್ದಾರೆ.

ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆಟ್ರಿ ಜೊತೆಗೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ ಅವರು, ವಿರಾಟ್ ಗೆ ಮೆರಿಟ್ ಇದೆ. ಆದರೆ, ಸ್ವಲ್ಪ ಲಂಚ ನೀಡಿದರೆ ಅವರು ಸೆಲೆಕ್ಟ್ ಆಗಿ ಬಿಡುತ್ತಾರೆ ಎಂದು ಆಯ್ಕೆ ತಂಡದ ಸದಸ್ಯರೊಬ್ಬರು ನಮ್ಮ ತಂದೆ ಬಳಿ ಹೇಳಿದ್ದರು. ಆದರೆ ಅದಕ್ಕೆ ನನ್ನ ತಂದೆ ನಿರಾಕರಿಸಿದ್ದರು ಮತ್ತು ಒಂದೇ ಒಂದು ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡುವುದಿಲ್ಲ. ಅವನನ್ನು ಆಯ್ಕೆ ಮಾಡುವುದಾದರೆ ಮೆರಿಟ್ ಮೇಲೆ ಆಯ್ಕೆ ಮಾಡಿ ಎಂದು ಕಡ್ಡಿ ಮುರಿದಂತೆ ಹೇಳಿದ್ದರಂತೆ.

ಲಂಚ ಕೇಳಿದ ಅಧಿಕಾರಿಯ ಹೆಸರು ಹೇಳಲು ನಿರಾಕರಿಸಿದ ವಿಶ್ವದ ನಂಬರ್ ಒನ್ ಬ್ಯಾಟ್ಸ್ ಮನ್, ನನ್ನ ತಂದೆ ಲಂಚ ನೀಡಲು ನಿರಾಕರಿಸಿದ್ದರಿಂದ ನಾನು ಜೂನಿಯರ್ ತಂಡಕ್ಕೆ ಆಯ್ಕೆಯಾಗಲಿಲ್ಲ. ಇದರಿಂದ ನನಗೆ ತುಂಬಾ ಬೇಸರವಾಯಿತು. ನನ್ನ  ಹೃದಯ ಛಿದ್ರಛಿದ್ರವಾಯ್ತು. ದಿನವಿಡೀ ನಾನು ಕಣ್ಣಿರಿಟ್ಟೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com