ಲಂಚ

'ಖಾತೆ ಮಾಡಿಕೊಡಲು ಲಂಚ ಪಡೆದವನ ಬಲಿ ಹಾಕಿ: ಅಜ್ಜಿ, ನಿಮಗೆ ಭೂಮಿ ಮಂಜೂರು ಗ್ಯಾರಂಟಿ, ನಾನಿದ್ದೇನೆ ಟೆನ್ಷನ್ ತಗೋಬೇಡಿ'
"ಅಮ್ಮ ನನಗೆ ಕೈ ಮುಗೀಬೇಡಿ. ನಾವು ನಿಮಗೆ ಕೈ ಮುಗಿಯಬೇಕು. ಸಮಸ್ಯೆ ಏನು ಅಂತ ಹೇಳಿ" ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಕೈಮುಗಿದ ಹಿರಿಯ ಜೀವಗಳ ಬಳಿ ಸಿಎಂ ಪ್ರಾರ್ಥಿಸಿದರು.

ಉಪ ತಹಶೀಲ್ದಾರ್ಗೆ ಶಾಕ್: ಲಂಚ ಪಡೆಯುತ್ತಿದ್ದಾಗಲೇ ಕಚೇರಿಗೆ ನುಗ್ಗಿ ರೆಡ್ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತ!
ಲೋಕಾಯುಕ್ತ ಪೊಲೀಸರ ಪ್ರಕಾರ, ರಾಕೇಶ್ ಒಂದು ವಾರದ ಹಿಂದೆ ವಂಶ ವೃಕ್ಷ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಗ್ರಾಮ ಲೆಕ್ಕಾಧಿಕಾರಿಯ ಪರಿಶೀಲನೆಯ ಬಳಿಕ ಅಂತಿಮ ಸಹಿಗಾಗಿ ಅರ್ಜಿಯನ್ನು ಸೋಮೇಶ್ ಅವರಿಗೆ ಕಳುಹಿಸಲಾಗಿತ್ತು.

DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ?: ಹಾಸನ ಜಿಲ್ಲಾಡಳಿತದಲ್ಲಿ ಸಂಚಲನ ಸೃಷ್ಟಿಸಿದ ವಾಟ್ಸ್ಆ್ಯಪ್ ಚಾಟ್; ತನಿಖೆಗೆ HDK ಒತ್ತಾಯ..! Video
ಈ ವಾಟ್ಸ್ಆ್ಯಪ್ ಸಂಭಾಷಣೆಯಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಲತಾ ಕುಮಾರಿ ಅವರನ್ನು ಮುಂದುವರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ 75 ಲಕ್ಷ ರೂ. ನೀಡಬೇಕೆಂಬ ಪ್ರಸ್ತಾಪವಿದೆ.

ಬಳ್ಳಾರಿ: ₹18,000 ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಸರ್ವೇಯರ್!
2018ರಲ್ಲಿ ತಿದ್ದುಪಡಿಗೊಂಡ ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಕೊಡದಿದ್ದರೆ ಮತ್ತೆ ಜೈಲಿಗೆ ಕಳುಹಿಸುತ್ತೇನೆ': ಬೆದರಿಕೆ ಹಾಕಿ 3 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾನ್ಸ್ಟೆಬಲ್ ಲೋಕಾಯುಕ್ತ ಬಲೆಗೆ..!
ಪ್ರತಿ ಭಾನುವಾರ ಠಾಣೆಗೆ ತೆರಳಿ ಹಾಜರಾತಿ ನೀಡಬೇಕಿದ್ದ ಜಾಮೀನು ಷರತ್ತನ್ನು ಸಡಿಲಿಸುವುದಕ್ಕಾಗಿ ಕಾನ್ಸ್ಟೆಬಲ್ ರೂ.3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತುಮಕೂರು: ₹30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ!
30 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಂದಾಯ ನಿರೀಕ್ಷಕರೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಧುಗಿರಿ ಕಸಬಾ ಕಂದಾಯ ನಿರೀಕ್ಷಕ ನಾಗೇಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಮಾಧ್ಯಮಗಳು ವಿಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ; ವೀಡಿಯೊ ಎಡಿಟ್ ಮಾಡಿ ಹರಿಬಿಡುವುದು ಬಿಜೆಪಿಯ ನೀಚ ತಂತ್ರ: ಶಿವಲಿಂಗೇಗೌಡ; Video
ನಾನು ಹೇಳಿದ್ದು 'ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ನೀಡಿ' ಎಂದು. ವೈರಲ್ ಆಗಿರುವ ವೀಡಿಯೊದಲ್ಲಿ, ಆ ಮಾತುಗಳನ್ನು ಹೇಳುವ ಮುನ್ನವೇ, ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ಲಂಚ ನೀಡಬಾರದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ.

ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ 'Tips' ನೀಡುವುದು ತಪ್ಪಲ್ಲ: ಲಂಚಕ್ಕೆ ಹೊಸ ಹೆಸರು ಇಟ್ರಾ ಸಚಿವ ಶಿವಲಿಂಗೇಗೌಡ..?
ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿದೆ, ಹೀಗಿರುವಾಗ ಸಾರ್ವಜನಿಕರು ಯಾಕೆ ಟಿಪ್ಸ್ ಕೊಡಬೇಕು? ಇದು ಲಂಚಕ್ಕೆ ಪ್ರಚೋದನೆ ನೀಡಿದಂತಲ್ಲವೇ?

8 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ಕೇಂದ್ರ GST ಅಧೀಕ್ಷಕ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ ; Video
ಬಂಧಿತ ಸರ್ಕಾರಿ ಅಧಿಕಾರಿಯನ್ನು ದಕ್ಷಿಣ ವಿಭಾಗ-4, ಎ-ರೇಂಜ್, ದಕ್ಷಿಣ ಕಮಿಷನರೇಟ್ನ ಕೇಂದ್ರ ಜಿಎಸ್ಟಿ ಅಧೀಕ್ಷಕ ಮೋಹಿತ್ ಎಂದು ಗುರುತಿಸಲಾಗಿದೆ. ಅಧಿಕಾರಿಗೂ ದೂರುದಾರನಿಗೂ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವ್ಯಕ್ತಿ ಸಲ್ಮಾನ್ನನ್ನೂ ಬಂಧಿಸಲಾಗಿದೆ.

