ಮುಂಬೈ ವಿರುದ್ಧ ನಿಧಾನಗತಿಯ ಓವರ್‌ ರೇಟ್‌: ಸ್ಟೀವನ್‌ ಸ್ಮಿತ್‌ಗೆ 12 ಲಕ್ಷ ರೂ. ದಂಡ

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 57 ರನ್‌ಗಳ ಭಾರಿ ಅಂತರದಲ್ಲಿ ರಾಜಸ್ಥಾನ ರಾಯಲ್ಸ್ ಸೋಲು ಅನುಭವಿಸಿತ್ತು. ಆ ಮೂಲಕ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಹ್ಯಾಟ್ರಿಕ್‌ ಪರಾಭವ ಅನುಭವಿಸಿತು.
ಸ್ಟೀವನ್‌ ಸ್ಮಿತ್‌
ಸ್ಟೀವನ್‌ ಸ್ಮಿತ್‌

ನವದೆಹಲಿ: ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 57 ರನ್‌ಗಳ ಭಾರಿ ಅಂತರದಲ್ಲಿ ರಾಜಸ್ಥಾನ ರಾಯಲ್ಸ್ ಸೋಲು ಅನುಭವಿಸಿತ್ತು. ಆ ಮೂಲಕ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಹ್ಯಾಟ್ರಿಕ್‌ ಪರಾಭವ ಅನುಭವಿಸಿತು.

ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ ಕಾರಣದಿಂದ ರಾಜಸ್ಥಾನ್‌ ರಾಯಲ್ಸ್ ತಂಡ ನಾಯಕ ಸ್ಟೀವನ್‌ ಸ್ಮಿತ್‌ಗೆ ದಂಡ ವಿಧಿಸಲಾಗಿದೆ. 20 ಓವರ್‌ಗಳನ್ನು ರಾಜಸ್ಥಾನ್‌ ರಾಯಲ್ಸ್ ನಿಗದಿತ ಸಮಯದಲ್ಲಿ ಮುಗಿಸಿಲ್ಲ. ಪ್ರಸ್ತುತ ಆವೃತ್ತಿಯು ಸ್ಮಿತ್‌ ಪಡೆಗೆ ಮೊದಲ ನಿಧಾನಗತಿಯ ಓವರ್‌ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೀವನ್‌ ಸ್ಮಿತ್‌ಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

"ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನ ನೀತಿ ಸಂಹಿತೆಯ ಅಡಿಯಲ್ಲಿ ಇದು ತಂಡದ ಮೊದಲ ಅಪರಾಧವಾದ್ದರಿಂದ, ನಾಯಕ ಸ್ಟೀವನ್‌ ಸ್ಮಿತ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು" ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com