ಐಪಿಎಲ್ ಇತಿಹಾಸದಲ್ಲೇ ವೇಗದ ಬೌಲಿಂಗ್ ದಾಖಲೆ ಬರೆದ ನಾಟ್ರ್ಜೆ
ದುಬೈ: ಡೆಲ್ಲಿ ಕ್ಯಾಪಿಟಲ್ ತಂಡದ ವೇಗಿ ಅನ್ರಿಚ್ ನಾಟ್ರ್ಜೆ ವೇಗದ ಎಸೆತ ಎಸೆದು ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದಿದ್ದಾರೆ.
ಇಂದು ದೆಹಲಿ ಕ್ಯಾಪಿಟಲ್ ತಂಡದ ವೇಗಿ ಅನ್ರಿಚ್ ನಾಟ್ರ್ಜೆ ಅವರು ಐಪಿಎಲ್ ಇತಿಹಾದಲ್ಲೇ ವೇಗದ ಬೌಲ್ ಎಸೆದು ದಾಖಲೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಗಂಟೆಗೆ 156.22 ಕಿಮೀ ವೇಗದಲ್ಲಿ ಬೌಲ್ ಮಾಡುವ ಮೂಲಕ ಅನ್ರಿಚ್ ನಾಟ್ರ್ಜೆಈ ಸಾಧನೆ ಮಾಡಿದ್ದಾರೆ.
ಇದರ ಜೊತೆಗೆ ಗಂಟೆಗೆ 155.21 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ಐಪಿಎಲ್ ಇತಿಹಾಸದಲ್ಲೇ ಎರಡನೇ ವೇಗದ ಬಾಲ್ ಅನ್ನೂ ಕೂಡ ನಾಟ್ರ್ಜೆ ಎಸೆದಿದ್ದಾರೆ. ಮೂರನೇ ವೇಗದ ಎಸೆತವು ಕೂಡ ಅನ್ರಿಚ್ ನಾಟ್ರ್ಜೆ ಅವರ ಹೆಸರಿನಲ್ಲಿದ್ದು, ಗಂಟೆಗೆ 154.74 ಕಿ.ಮೀ ವೇಗದಲ್ಲಿ ಮೂರನೇ ಬಾಲ್ ಬೌಲ್ ಮಾಡಿದ್ದಾರೆ. ಗಂಟೆಗೆ 154.40 ಕಿ.ಮೀ ವೇಗದಲ್ಲಿ ಬೌಲ್ ಮಾಡಿರುವ ವೇಗ ಡೇಲ್ ಸ್ಟೇನ್ ಅವರು ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.
ಆರಂಭದಿಂದಲೇ ಉತ್ತಮವಾಗಿ ಬೌಲ್ ಮಾಡಿದ ಡೆಲ್ಲಿ ಬೌಲರ್ಸ್, ರಾಜಸ್ಥಾನ್ ಬ್ಯಾಟ್ಸ್ ಮ್ಯಾನ್‍ಗಳನ್ನು ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ಅನ್ರಿಚ್ ನಾಟ್ರ್ಜೆ ಅವರು ಎರಡು ವಿಕೆಟ್ ಕಿತ್ತು 33 ರನ್ ಕೊಟ್ಟರು. ಇವರಿಗೆ ಉತ್ತಮ ಸಾಥ್ ಕೊಟ್ಟ ಯುವ ವೇಗ ತುಷಾರ್ ದೇಶಪಾಂಡೆ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 37 ರನ್ ನೀಡಿದರು. ಕಗಿಸೊ ರಬಡಾ, ಆಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡರು. ನಾಲ್ಕು ಓವರ್ ಬೌಲ್ ಮಾಡಿದ ಅನ್ರಿಚ್ ನಾಟ್ರ್ಜೆ ಅವರು ಎರಡು ವಿಕೆಟ್ ಕಿತ್ತು 33 ರನ್ ಕೊಟ್ಟರು. ಇವರಿಗೆ ಉತ್ತಮ ಸಾಥ್ ಕೊಟ್ಟ ಯುವ ವೇಗ ತುಷಾರ್ ದೇಶಪಾಂಡೆ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 37 ರನ್ ನೀಡಿದರು. ಕಗಿಸೊ ರಬಡಾ, ಆಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡರು.
Related Article
ಪ್ರವಾಹಕ್ಕೆ ನಲುಗಿದ ಮುತ್ತಿನ ನಗರಿ, ಅತಂತ್ರ ಸ್ಥಿತಿಯಲ್ಲಿ ಕೋವಿಡ್ ಸೋಂಕಿತರು, ಚಿಕಿತ್ಸೆ ಸಿಗದೆ ಪರದಾಟ!
ವಾಯುಭಾರ ಕುಸಿತ: ಮತ್ತೆರಡು ದಿನ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಹೈದರಾಬಾದ್ ನಲ್ಲಿ ಮಹಾ ಮಳೆಗೆ 18 ಬಲಿ, ಎರಡು ದಿನ ರಜೆ ಘೋಷಣೆ, ಮನೆಯಿಂದ ಹೊರಬರದಂತೆ ಕೆಟಿಆರ್ ಮನವಿ
ಹೈದರಾಬಾದ್ ನಲ್ಲಿ ಸತತ ಮಳೆ: ಎರಡು ದಿನ ರಜೆ ಘೋಷಣೆ, ಮನೆಯಿಂದ ಹೊರಬರದಂತೆ ಕೆಟಿಆರ್ ಮನವಿ
ಐಪಿಎಲ್ 2020: ರಾಜಸ್ಥಾನ ವಿರುದ್ಧ ದೆಹಲಿಗೆ 13 ರನ್ ಗಳ ರೋಚಕ ಜಯ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ