ಮಾಸ್ಕ್ ಅಭಿಯಾನ: ಕ್ರಿಕೆಟಿಗರು ತಾವೇ ರೆಡಿ ಮಾಡಿದ ಮಾಸ್ಕ್ ಧರಿಸಿ ಜಾಗೃತಿ, ವಿಡಿಯೋ

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನತೆ ಟೊಂಕ ಕಟ್ಟಿ ಹೋರಾಡುತ್ತಿದ್ದು ಇನ್ನು ಕ್ರಿಕೆಟಿಗರು ಸಹ ಕಡಿಮೆ ಇಲ್ಲ.
ಭಾರತೀಯ ಕ್ರಿಕೆಟಿಗರು
ಭಾರತೀಯ ಕ್ರಿಕೆಟಿಗರು

ನವದೆಹಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನತೆ ಟೊಂಕ ಕಟ್ಟಿ ಹೋರಾಡುತ್ತಿದ್ದು ಇನ್ನು ಕ್ರಿಕೆಟಿಗರು ಸಹ ಕಡಿಮೆ ಇಲ್ಲ.

ಕೊರೋನಾ ವಿರುದ್ಧ ಟೀಂ ಇಂಡಿಯಾ ಆಟಗಾರರು ಜಾಗೃತಿ ಮೂಡಿಸಲು ಮತ್ತೊಮ್ಮೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಬಿಸಿಸಿಐ ಆರಂಭಿಸಿರುವ #TeamMaskForceನ ಭಾಗವಾಗಿ ಕ್ರಿಕೆಟಿಗಾರ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಗಂಗೂಲಿ ಸೇರಿದಂತೆ ಹಲವಾರು ಕ್ರಿಕೆಟಿಗರು ಸ್ವತಃ ತಾವೇ ವಿನ್ಯಾಸಗೊಳಿಸಿರುವ ಮಾಸ್ಕ್ ಗಳನ್ನು ಧರಿಸಿ ಮಾಸ್ಕ್ ಧರಿಸುವ ಮಹತ್ವವನ್ನು ಸಾರುತ್ತಿದ್ದಾರೆ. 

ಇನ್ನು ಕ್ರಿಕೆಟಿಗರು ತಮ್ಮ ಮಾಸ್ಕ್ ಗಳ ಮೇಲೆ ತಮ್ಮ ಸಾಧನೆಯನ್ನು ಸಾರುವ, ತಮ್ಮ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಚುಟುಕು ಹೆಸರುಗಳು, ಅದೃಷ್ಟ ಸಂಖ್ಯೆ ಅಥವಾ ತಮ ಹೆಸರಿನ ಲಾಂಛನವನ್ನು ಆಟಗಾರರು ಅಳವಡಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. 

ಈ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com