ಜಡೇಜಾ ಬದಲಿಗೆ ಸಬ್‍ಸ್ಟ್ಯೂಟ್ ಆಡಿದ್ದ ಚಹಾಲ್ ಕಮಾಲ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಗೆದ್ದ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದೆ. 

ಕ್ಯಾನ್ ಬೆರಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 11 ರನ್ ಗಳಿಗೆ ಗೆಲುವು ಸಾಧಿಸಿದೆ. ಬ್ಯಾಟಿಂಗ್ ನಲ್ಲಿ ಜಡೇಜಾ ಮಿಂಚಿದ್ದು 44 ರನ್ ಪೇರಿಸಿದ್ದರು. ಜಡೇಜಾ ಗಾಯಗೊಂಡಿದ್ದರಿಂದ ಅವರ ಬದಲಿಗೆ ಯಜುವೇಂದ್ರ ಚಹಾಲ್ ಆಡಿದ್ದು ಬೌಲಿಂಗ್ ನಲ್ಲಿ ಮಿಂಚಿ 3 ವಿಕೆಟ್ ಪಡೆದಿದ್ದರು. ಇದು ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. 

ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಕೆಎಲ್ ರಾಹುಲ್ ಅವರ ಅರ್ಧಶತಕ ಮತ್ತು ರವೀಂದ್ರ ಜಡೇಜಾ ಅವರ ಸಮಯೋಚಿತ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. 162 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಪೇರಿಸಿದ್ದು 11 ರನ್ ಗಳಿಂದ ಭಾರತಕ್ಕೆ ಶರಣಾಗಿದೆ.

ಆಸ್ಟ್ರೇಲಿಯಾ ಪರ ಶಾರ್ಟ್ 34, ಆರೋನ್ ಫಿಂಚ್ 35, ಹೆನ್ರಿಕ್ 30 ಮತ್ತು ಅಬೋಟ್ ಅಜೇಯ 12 ರನ್ ಪೇರಿಸಿದ್ದಾರೆ.

ಧವನ್ ಕೇವಲ 1 ರನ್ ಗಳಿಸಿದರೆ, ಕೊಹ್ಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಬಂದಷ್ಟೇ ವೇಗವಾಗಿ 23 ರನ್ ಗಳಿಸಿ ಹೆನ್ರಿಕ್ಸ್ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿದೆ ಉಳಿದ ಯಾವ ಆಟಗಾರರೂ ಎರಡಂಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಭಾರತ  ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಆ ಮೂಲಕ ಆಸ್ಟ್ರೇಲಿಯಾಗೆ ಗೆಲ್ಲಲು 162  ರನ್ ಗಳ ಗುರಿ ನೀಡಿತು.

ಆಸಿಸ್ ಪರ ಹೆನ್ರಿಕ್ಸ್ 3 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ 2, ಜಂಪಾ ಮತ್ತು ಸ್ವೆಪ್ಸನ್ ತಲಾ 1 ವಿಕೆಟ್ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com