ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹ್ಯಾಮಿಲ್ಟನ್ ನಲ್ಲಿ ದಾಖಲೆ ಬರೆದ ಐಯ್ಯರ್-ರಾಹುಲ್ ಭರ್ಜರಿ ಜೊತೆಯಾಟ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

ಹ್ಯಾಮಿಲ್ಟನ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

ಇಂದು ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದ ಶ್ರೇಯಸ್ ಅಯ್ಯರ್ ಮತ್ತು ಅಜೇಯ 88ರನ್ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

ಹ್ಯಾಮಿಲ್ಟನ್ ಮೈದಾನದಲ್ಲಿ ಇಂದು 4ನೇ ವಿಕೆಟ್ ಗೆ ಈ ಜೋಡಿ ಭರ್ಜರಿ 136 ರನ್ ಗಳನ್ನು ಕಲೆಹಾಕಿತು. ಆ ಮೂಲಕ ಹ್ಯಾಮಿಲ್ಟನ್ ಮೈದಾನದಲ್ಲಿ 3ನೇ ಗರಿಷ್ಠ ಜೊತೆಯಾಟ ನೀಡಿದ ಭಾರತದ ಜೋಡಿ ಎಂಬ ಕೀರ್ತಿಗೆ ಭಾಜನವಾಯಿತು, ಇದಕ್ಕೂ ಮೊದಲು ಇದೇ ಮೈದಾನದಲ್ಲಿ 2009ರಲ್ಲಿ ಭಾರತದ ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಜೋಡಿ ಮೊದಲ ವಿಕೆಟ್ ಗೆ 201 ರನ್ ಗಳ ಬೃಹತ್ ಜೊತೆಯಾಟವಾಡಿತ್ತು. ಇದು ಈ ವರೆಗಿನ ಗರಿಷ್ಠ ಜೊತೆಯಾಟವಾಗಿದ್ದು, ಆ ಬಳಿಕ 2015ರಲ್ಲಿ ಐರ್ಲೆಂಡ್ ವಿರುದ್ಧ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಮೊದಲ ವಿಕೆಟ್ ಗೆ 174 ರನ್ ಗಳಿಸಿತ್ತು, ಇದು 2ನೇ ಗರಿಷ್ಠ ರನ್ ಜೊತೆಯಾಟವಾಗಿದೆ.

ಇಂದು ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಜೋಡಿ 4ನೇ ವಿಕೆಟ್ ಗೆ 136 ರನ್ ಸಿಡಿಸಿ 3ನೇ ಗರಿಷ್ಠ ರನ್ ಜೊತೆಯಾಟ ನೀಡಿದೆ. 4ನೇ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಜೋಡಿ ಇದ್ದು, 2014ರಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಈ ಜೋಡಿ 6ನೇ ಕ್ರಮಾಂಕದಲ್ಲಿ 127ರನ್ ಕಲೆಹಾಕಿತ್ತು.

Related Stories

No stories found.

Advertisement

X
Kannada Prabha
www.kannadaprabha.com