ಸನತ್ ಜಯಸೂರ್ಯ ದಾಖಲೆ ಅಳಿಸಿದ ರೋ'ಹಿಟ್' ಮ್ಯಾನ್

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಎರಡು ದಾಖಲೆಗಳನ್ನು ಬರೆದಿದ್ದಾರೆ.

Published: 19th January 2020 09:17 PM  |   Last Updated: 19th January 2020 09:17 PM   |  A+A-


Rohit Sharma

ರೋಹಿತ್ ಶರ್ಮಾ

Posted By : Vishwanath S
Source : UNI

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಎರಡು ದಾಖಲೆಗಳನ್ನು ಬರೆದಿದ್ದಾರೆ.

ಆಸ್ಟ್ರೇಲಿಯಾ ನೀಡಿದ್ದ 287 ರನ್ ಗಳ ಗುರಿಯನ್ನು ಹಿಂಬಾಲಿಸಿದ ಟೀಂ ಇಂಡಿಯಾದ ಪರ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿದರು. 

ತಮ್ಮ ನೈಜ ಬ್ಯಾಟಿಂಗ್ ಮಾಡಿದ ರೋಹಿತ್ ರನ್ ಕಲೆ ಹಾಕುತ್ತಾ ಸಾಗಿದರು. 128 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ 119 ರನ್ ಸಿಡಿಸಿ ಅಬ್ಬರಿಸಿದರು. ಇದು ರೋಹಿತ್ ಶರ್ಮಾ ವೃತ್ತಿ ಜೀವನದ 29ನೇ ಶತಕವಾಗಿದೆ. ಇಷ್ಟೇ ಅಲ್ಲದೆ ಇವರು ಏಕದಿನ ಕ್ರಿಕೆಟ್ ನಲ್ಲಿ ಒಂಬತ್ತು ಸಾವಿರ ರನ್ ಸೇರಿಸಿ ಮಿಂಚಿದರು.

ಇದೇ ವೇಳೆ 28 ಶತಕ ಸಿಡಿಸಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರ ದಾಖಲೆ ಸಮಗಟ್ಟಿದ್ದ ರೋಹಿತ್ ಶರ್ಮಾ 29ನೇ ಶತಕ ಸಿಡಿಸುವ ಮೂಲಕ ಅವರ ದಾಖಲೆಯನ್ನು ಮುರಿದಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp