ಕೊರೋನಾ ವೈರಸ್ ಎಫೆಕ್ಟ್: ಮತ್ತೆ ವಿದೇಶದಲ್ಲಿ ಐಪಿಎಲ್ ಆಯೋಜನೆ?

ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನಿಂದಾಗಿ ಸ್ಥಗಿತವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತದಿಂದ ಆಚೆ ಅಂದರೆ ವಿದೇಶದಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ

ನವದೆಹಲಿ: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನಿಂದಾಗಿ ಸ್ಥಗಿತವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತದಿಂದ ಆಚೆ ಅಂದರೆ ವಿದೇಶದಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಹಿಂದೆಯೇ ಬಿಸಿಸಿಐ ಐಪಿಎಲ್ ಆಯೋಜನೆ ಕುರಿತು ಇರುವ ಎಲ್ಲ ಆಯ್ಕೆಗಳನ್ನೂ ಪರಿಶೀಲಿಸುವುದಾಗಿ ಹೇಳಿತ್ತು. ಅದರಂತೆ ಇದೀಗ ವಿದೇಶದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಮಾಡುವತ್ತ ಬಿಸಿಸಿಐ ಚಿಂತನೆಯಲ್ಲಿ ತೊಡಗಿದೆ. ಬಿಸಿಸಿಐ ಮೂಲಗಳ ಪ್ರಕಾರ ಟಿ20 ವಿಶ್ವಕಪ್ ಟೂರ್ನಿಯನ್ನಿ ಐಸಿಸಿ ಮುಂದೂಡಿರುವುದರಿಂದ ಐಪಿಎಲ್ ಆಯೋಜನೆಗೆ ಬಿಸಿಸಿಐಗೆ ಅವಕಾಶ ಸಿಕ್ಕಂತಾಗಿದೆ. ಆದರೆ ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ಇದು ಬಿಸಿಸಿಐ ಪ್ರಯತ್ನಕ್ಕೆ ಹಿನ್ನಡೆಯುನ್ನುಂಟು ಮಾಡಿದೆ.

ಕೊರೋನಾ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಿಯನ್ನು ರದ್ದು ಮಾಡುವ ಪರಿಸ್ಥಿತಿಯಲ್ಲಂತೂ ಬಿಸಿಸಿಐ ಇಲ್ಲ. ಕಾರಣ ಟೂರ್ನಿ ರದ್ದಾದರೆ ಬಿಸಿಸಿಐಗೆ 4 ಸಾವಿರ ಕೋಟಿ ರೂ ನಷ್ಟವಾಗಲಿದೆ. ಹೀಗಾಗಿ ಬಿಸಿಸಿಐ ಟೂರ್ನಿ ರದ್ದು ಮಾಡುವ ದುಸ್ಸಾಹಸಕ್ಕೆ ಕೈಹಾಕದು.  ಕೊರೋನಾ ವೈರಸ್ ಹೊರತಾಗಿಯೂ ಟೂರ್ನಿ ಆಯೋಜನೆಗೆ ಇರುವ ಎಲ್ಲ ಅವಕಾಶಗಳನ್ನೂ ಬಿಸಿಸಿಐ ಎದುರು ನೋಡುತ್ತಿದೆ. ಈ ಹಿಂದೆ 2009ರಲ್ಲಿ ಲೋಕಸಭಾ ಚುನಾವಣೆಯಿಂದಾಗಿ ಮೊದಲ ಬಾರಿಗೆ ಐಪಿಎಲ್ ನಲ್ಲಿ ವಿದೇಶದಲ್ಲಿ ನಡೆಸಲಾಗಿತ್ತು. ಅಂದು ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಐಪಿಎಲ್ ಗೆ ವೇದಿಕೆಯಾಗಿತ್ತು. ಬಳಿಕ 2014ರಲ್ಲಿ ಭಾರತ ಮತ್ತು ಯುಎಇಯಲ್ಲಿ ನಡೆಸಲಾಗಿತ್ತು. ಈಗಲೂ ಸಹ ಬಿಸಿಸಿಐ ಇಂತಹುದೇ ದಾರಿಯನ್ನು ಹುಡುಕುತ್ತಿದೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಪಿಎಲ್ ಆಯೋಜಿಸುವ ಕುರಿತು ಬಿಸಿಸಿಐಗೆ ಆಹ್ವಾನ ನೀಡಿದೆ. 

ಐಸಿಸಿ ನಿರ್ಣಯದ ಮೇಲೆ ಐಪಿಎಲ್ ಭವಿಷ್ಯ
ಇನ್ನು ಕೊರೋನಾ ಸಾಂಕ್ರಾಮಿಕದ ನಡುವೆ ಕ್ರಿಕೆಟ್ ಆಯೋಜನೆ ಕುರಿತು ಅಂತಾರಾಷ್ಟ್ಪೀಯ ಕ್ರಿಕೆಟ್ ಸಮಿತಿ-ಐಸಿಸಿ ಕೈಗೊಳ್ಳುವ ನಿರ್ಣಯವೇ ಪ್ರಮುಖವಾಗಿದ್ದು, ಜೂನ್ ರವರೆಗೂ ಐಸಿಸಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಟಿ20 ವಿಶ್ವಕಪ್ ಮತ್ತು ಕ್ರಿಕೆಟ್ ಚಟುವಟಿಕೆಗಳಿಗೆ ಚಾಲನೆ ನೀಡುವ ಕುರಿತು ಐಸಿಸಿ ನಿರ್ಣಯವನ್ನು ಬಿಸಿಸಿಐ ಕಾದು ನೋಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com