ಮಹಿಳಾ ಟಿ20 ವಿಶ್ವಕಪ್: ಪತ್ನಿಗಾಗಿ ಟೂರ್ನಿಯನ್ನೇ ಬಿಟ್ಟು ತವರಿಗೆ ಓಡಿಬಂದ ಮಿಚೆಲ್ ಸ್ಟಾರ್ಕ್!

ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಫೈನಲ್‌ನ ಪಂದ್ಯದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಇದೀಗ ತಮ್ಮ ಪತ್ನಿಗಾಗಿ ಟೂರ್ನಿಯನ್ನೇ ಬಿಟ್ಟು ತವರಿಗೆ ದೌಡಾಯಿಸಿದ್ದಾರೆ.
ಮಿಚೆಲ್ ಸ್ಟಾರ್ಕ್-ಹೀಲಿ
ಮಿಚೆಲ್ ಸ್ಟಾರ್ಕ್-ಹೀಲಿ
Updated on

ಮೆಲ್ಬೋರ್ನ್: ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಫೈನಲ್‌ನ ಪಂದ್ಯದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಇದೀಗ ತಮ್ಮ ಪತ್ನಿಗಾಗಿ ಟೂರ್ನಿಯನ್ನೇ ಬಿಟ್ಟು ತವರಿಗೆ ದೌಡಾಯಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿ ಭಾನುವಾರ ನಡೆಯಲಿರುವ ಮಹಿಳಾ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ.

ಆಸ್ಟ್ರೇಲಿಯಾ ಮಹಿಳಾ ತಂಡದಲ್ಲಿ ಸ್ಟಾರ್ಕ್ ಪತ್ನಿ ಹೀಲಿ ಆಡುತ್ತಿದ್ದು ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಹುರಿದುಂಬಿಸುವ ಸಲುವಾಗಿ ತವರಿಗೆ ಮರಳಿದ್ದಾರೆ.

ಆಸ್ಟ್ರೇಲಿಯಾ ತರಬೇತುದಾರ ಜಸ್ಟಿನ್ ಲ್ಯಾಂಗರ್ ಈ ಬಗ್ಗೆ ಮಾಹಿತಿ ನೀಡಿದ್ದು, 'ವಿಶ್ವಕಪ್ ಫೈನಲ್‍ನಲ್ಲಿ ಸ್ಟಾರ್ಕ್ ಅವರ ಪತ್ನಿ ಹೀಲಿಯ ಆಟವನ್ನು ನೋಡಲು ಸ್ಟಾರ್ಕ್ ಅವರಿಗೆ ಸುವರ್ಣ ಅವಕಾಶ. ಹೀಗಾಗಿ ಅವರನ್ನು ಫೈನಲ್ ಪಂದ್ಯ ವೀಕ್ಷಿಸಲು ಕಳುಹಿಸುತ್ತಿದ್ದೇವೆ. ಅದ್ಭುತ್ ಕ್ಷಣವನ್ನು ಸ್ಟಾರ್ಕ್ ಕಣ್ಣು ತುಂಬಿಕೊಳ್ಳಲಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com