'ಆರ್‌ಸಿಬಿ ತಂಡದ ಕೌಂಟರ್ ಅಟ್ಯಾಕಿಂಗ್ ಬ್ಯಾಟ್ಸ್‌ಮನ್ ನೀವು' ಹ್ಯಾರಿ ಕೇನ್ ಟ್ವೀಟ್‌ಗೆ ಕೊಹ್ಲಿ ಪ್ರತಿಕ್ರಿಯೆ
ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಅವಕಾಶ ಇದೆಯೇ ಎಂದು ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಫುಟ್ಬಾಲ್ ಆಟಗಾರ ಹ್ಯಾರಿ ಕೇನ್ ಕೇಳಿದ್ದಾರೆ.
Published: 28th November 2020 05:17 PM | Last Updated: 28th November 2020 05:17 PM | A+A A-

ಕೊಹ್ಲಿ-ಹ್ಯಾರಿ ಕೇನ್
ನವದೆಹಲಿ: ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಅವಕಾಶ ಇದೆಯೇ ಎಂದು ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಫುಟ್ಬಾಲ್ ಆಟಗಾರ ಹ್ಯಾರಿ ಕೇನ್ ಕೇಳಿದ್ದಾರೆ.
"ಟಿ20 ಪಂದ್ಯದ ಗೆಲುವಿನ ಬ್ಯಾಟಿಂಗ್ ಮಾಡಿದ್ದೇನೆ. ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆಡಲು ಅವಕಾಶ ಇದೆಯೇ ವಿರಾಟ್ ಕೊಹ್ಲಿ",? ಎಂದು ಕೇನ್ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್‌ಸಿಬಿ, "ನಿಮಗಾಗಿ ಜೆರ್ಸಿ ನಂ.10 ಸಿದ್ದಗೊಳಿಸುತ್ತೇವೆ ಕೇನ್ ಎಂದು ಹೇಳಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರಖ್ಯಾತ ಫುಟ್ಬಾಲ್ ಆಟಗಾರನ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಲು ಸಾಕಷ್ಟು ಸಮಯ ತೆಗೆದುಕೊಳ್ಳಲಿಲ್ಲ. ಸ್ಟ್ರೈಕರ್ ಕೇನ್ ಆಟವನ್ನು ಮೆಚ್ಚಿಕೊಂಡ ಕೊಹ್ಲಿ, ಕೌಂಟರ್ ಅಟ್ಯಾಕಿಂಗ್ ಬ್ಯಾಟ್ಸ್‌ಮನ್ ಆಗಿ ನಿಮ್ಮನ್ನು ಆರ್‌ಸಿಬಿ ಆಯ್ಕೆ ಮಾಡಬಹುದು ಎಂದು ಹೇಳಿದರು. "ಹಹ.. ಉತ್ತಮ ಕೌಶಲ ಸಹ ಆಟಗಾರ. ಭವಿಷ್ಯ ನೀವು ಕೌಂಟರ್ ಅಟ್ಯಾಕಿಂಗ್ ಬ್ಯಾಟ್ಸ್‌ಮನ್ ಆಗಿ ಅವಕಾಶ ಪಡೆಯಬಹುದು," ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದರು.
ವಿರಾಟ್ ಕೊಹ್ಲಿ ಹಾಗೂ ಹ್ಯಾರಿ ಕೇನ್ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಈ ಹಿಂದೆ ತಮ್ಮ ಪ್ರತ್ಯೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸಂದರ್ಭಗಳಲ್ಲಿ ಈ ಇಬ್ಬರೂ ಒಬ್ಬರಿಗೂಬ್ಬರು ಹಾರೈಸುತ್ತಿದ್ದರು. 2018ರ ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹ್ಯಾರಿ ಕೇನ್ ಭೇಟಿ ಮಾಡಿದ್ದರು.
ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿಯೇ ಹ್ಯಾರಿ ಕೇನ್ ಪ್ರಸ್ತುತ ಅತ್ಯುತ್ತಮ ಸ್ಟ್ರೈಕರ್ ಆಗಿದ್ದಾರೆ. ತಾನು ಪ್ರತಿನಿಧಿಸುವ ಟೊಟ್ಟೆನ್ಯಾಮ್ ಕ್ಲಬ್ ಪರ ಆಡಿದ 9 ಲೀಗ್ ಪಂದ್ಯಗಳಲ್ಲಿ ಕೇನ್ ಒಟ್ಟು 7 ಗೋಲುಗಳನ್ನು ಸಿಡಿಸಿದ್ದಾರೆ. ಯೂರೋಪ್ ಲೀಗ್‌ನಲ್ಲಿಯೂ ತಮ್ಮ ಕ್ಲಬ್‌ಗೆ ಅವರು ಗೋಲು ಗಳಿಸಿದ್ದಾರೆ. ಹ್ಯಾರಿ ಕೇನ್ ನಾಯಕತ್ವ ಟೊಟ್ಟೆನ್ಯಾಮ್ ತಂಡ ಒಟ್ಟು 20 ಅಂಕಗಳೊಂದಿಗೆ ಪ್ರೀಮಿಯರ್ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ. 2020-21ರ ಆವೃತ್ತಿಯಲ್ಲಿ ಹ್ಯಾರಿ ಕೇನ್ ಡೈನಾಮಿಕ್ ಸ್ಟ್ರೈಕರ್ ಆಗಿದ್ದಾರೆ ಹಾಗೂ ಪ್ರತಿಯೊಂದು ಆವೃತ್ತಿಯಲ್ಲಿಯೂ ಅವರು ಅತ್ಯದ್ಭುತ ಆಟಗಾರನಾಗಿದ್ದಾರೆ.
ಫುಟ್ಬಾಲ್ ಕ್ರೀಡೆಯಲ್ಲಿ ಹಲವು ಸಾಧನೆ ಮಾಡಿರುವ ಹ್ಯಾರಿ ಕೇನ್ ಇದೀಗ ಕ್ರಿಕೆಟ್‌ನಲ್ಲಿಯೂ ದೊಡ್ಡ ಹೆಸರು ಮಾಡುವ ಬಯಕೆಯನ್ನು ಹೊರಹಾಕಿದ್ದಾರೆ. ಇಂಗ್ಲೆಂಡ್ ತಂಡದ ಸಹ ಆಟಗಾರರು ಬೌಲಿಂಗ್‌ಗೆ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹ್ಯಾರಿ ಕೇನ್ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಜೋ ಹರ್ಟ್ ಬೌಲಿಂಗ್‌ನಲ್ಲಿ ಹ್ಯಾರಿ ಕೇನ್ ಬ್ಯಾಟಿಂಗ್ ಮಾಡಿದರು ಹಾಗೂ ರನ್‌ಗಳನ್ನು ಗಳಿಸಿದ್ದರು. ಕೇನ್ ಬ್ಯಾಟಿಂಗ್ ವೇಳೆ ಮತ್ತೊಬ್ಬ ಸ್ಟಾರ್ ಆಟಗಾರ ಡೆಲ್ ಅಲ್ಲಿಗೆ ಬಹುತೇಕ ಕ್ಯಾಚ್ ನೀಡಿದ್ದರು. ಆದರೆ ಅವರು ಕ್ಯಾಚ್ ಅನ್ನು ಕೈಚೆಲ್ಲಿದ್ದರು. ಇದರಿಂದ ಕೇನ್ ಸಂಭ್ರಮ ಪಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
Haha good skills mate. Maybe we can get you in as a counter attacking batsman @HKane https://t.co/rYjmVUkdwO
— Virat Kohli (@imVkohli) November 28, 2020