ಬುಮ್ರಾ ಬೌಲಿಂಗ್
ಬುಮ್ರಾ ಬೌಲಿಂಗ್

ಕೊನೆಯ ಓವರ್ ಮುಗಿಸಲು 15 ನಿಮಿಷ, 10 ಎಸೆತ ತೆಗೆದುಕೊಂಡ ಜಸ್​ಪ್ರೀತ್ ಬುಮ್ರಾ

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಒಂದು ಓವರ್ ಮುಗಿಸಲು ಭಾರತದ ಜಸ್ ಪ್ರೀತ್ ಬುಮ್ರಾ 15 ನಿಮಿಷ, 10 ಎಸೆತ ತೆಗೆದುಕೊಂಡು ಸುದ್ದಿಗೆ ಗ್ರಾಸವಾಗಿದ್ದಾರೆ.

ಲಂಡನ್: ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಒಂದು ಓವರ್ ಮುಗಿಸಲು ಭಾರತದ ಜಸ್ ಪ್ರೀತ್ ಬುಮ್ರಾ ಬರೊಬ್ಬರಿ 15 ನಿಮಿಷ, 10 ಎಸೆತ ತೆಗೆದುಕೊಂಡು ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು,..ಆರಂಭದಲ್ಲಿ ಬಿಗಿ ದಾಳಿ ಮಾಡಿದ ಬುಮ್ರಾ 2ನೇ ಹಾಗೂ 3ನೇ ಸೆಷನ್ ವೇಳೆಗೆ ಮಂಕಾಗಿದ್ದರು. ಅದರಲ್ಲೂ ತಮ್ಮ ಕೊನೆಯ ಓವರ್‌ನಲ್ಲಿ ಸಂಪೂರ್ಣ ಲಯ ತಪ್ಪಿದರು. ಪರಿಣಾಮ ಕೊನೆಯ ಓವರ್ ಮುಗಿಸಲು 15 ನಿಮಿಷಗಳು ಬೇಕಾಯಿತು. ಇನ್ನು ಇದೇ ವೇಳೆ ಜೇಮ್ಸ್ ಅಂಡರ್ಸನ್ ಹೆಲ್ಮೆಟ್  ಬದಲಿಸಲು ತೆಗೆದುಕೊಂಡ ಸಮಯ ಕೂಡ ಬುಮ್ರಾ ಬೌಲಿಂಗ್ ಮೇಲೆ ಪರಿಣಾಮ ಬೀರಿತು. ಅದರಂತೆ ಈ ಓವರ್‌ನಲ್ಲಿ ಒಟ್ಟು 4 ನೋ ಬಾಲ್‌ಗಳನ್ನು ಎಸೆಯುವ ಮೂಲಕ ಹೆಚ್ಚುವರಿ ರನ್ ಕೂಡ ಬಿಟ್ಟು ಕೊಟ್ಟರು. 

ಬುಮ್ರಾ ಅವರ ಕೊನೆಯ ಓವರ್ ವಿವರ
125.1 – ಮೊದಲ ಎಸೆತ ಬೌನ್ಸರ್, ಚೆಂಡು ಜೇಮ್ಸ್ ಆಂಡರ್ಸನ್ ಅವರ ಹೆಲ್ಮೆಟ್​ಗೆ ಬಡಿಯಿತು. ಇದೇ ವೇಳೆ ಅಂಡರ್ಸನ್ ಹೆಲ್ಮೆಟ್ ಬದಲಿಸಿದರು.
125.2- ಎರಡನೇ ಎಸೆತ ಶಾರ್ಟ್​ ಬಾಲ್, ಯಾವುದೇ ರನ್ ಇಲ್ಲ.
125.3- ಮೂರನೇ ಎಸೆತವನ್ನು ಅಂಡರ್ಸನ್​ಗೆ ಗುರುತಿಸಲು ಸಾಧ್ಯವಾಗಲಿಲ್ಲ.
125.4- ನಾಲ್ಕನೇ ಎಸೆತ ನೋ ಬಾಲ್.
125.4 – ನಾಲ್ಕನೇ ಎಸೆತದಲ್ಲಿ ಅಂಡರ್ಸನ್ ಯಾವುದೇ ರನ್ ತೆಗೆಯಲಿಲ್ಲ.
125.5- ಐದನೇ ಎಸೆತ ನೋಬಾಲ್.
125.5- ಐದನೇ ಎಸೆತವನ್ನು ಅಂಡರ್ಸನ್ ರಕ್ಷಣಾತ್ಮಕವಾಗಿ ಆಡಿದರು.
125.6- ಓವರ್‌ಗಳ ಕೊನೆಯ ಎಸೆತ ನೋ ಬಾಲ್ ಆಗಿತ್ತು.
125.6- ಮತ್ತೊಮ್ಮೆ ಎಸೆದ ಚೆಂಡು ಕೂಡ ನೋ ಬಾಲ್ ಆಯಿತು.
125.6- ಕೊನೆಯ ಎಸೆತದಲ್ಲಿ ಯಾವುದೇ ರನ್ ನೀಡದೆ ಓವರ್ ಅಂತ್ಯಗೊಳಿಸಿದರು.

ಈ ಓವರ್‌ನಲ್ಲಿ ಜಸ್​ಪ್ರೀತ್ ಬುಮ್ರಾ ಬರೋಬ್ಬರಿ 10 ಎಸೆತಗಳನ್ನು ಎಸೆದರು. ಅಲ್ಲದೆ ಇಂಗ್ಲೆಂಡ್ ಖಾತೆಗೆ ಹೆಚ್ಚುವರಿಯಾಗಿ 4 ರನ್ ಬಿಟ್ಟುಕೊಟ್ಟರು.

Related Stories

No stories found.

Advertisement

X
Kannada Prabha
www.kannadaprabha.com