2ನೇ ಟೆಸ್ಟ್ ಪಂದ್ಯ: ಬ್ಯಾಟಿಂಗ್ ವೈಫಲ್ಯದ ನಡುವೆಯೂ ಎರಡೆರಡು ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 20 ರನ್ ಗಳಿಗೆ ಔಟ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎರಡೆರಡು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಹೌದು.. ಇಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಈ ಎರಡು ವಿಶ್ವದಾಖಲೆಗಳನ್ನು ನಿರ್ಮಿಸಿದ್ದು, ನಾಯಕನಾಗಿ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ 4ನೇ ನಾಯಕ ಎಂಬ ಹಿರಿಮೆಗೆ ಪಾತ್ರರಾದರು. ಕೊಹ್ಲಿ ಈ ವರೆಗೂ 63 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, ಈ ಪೈಕಿ 37 ಪಂದ್ಯಗಳಲ್ಲಿ ಭಾರತ ತಂಡ ಜಯಗಳಿಸಿದೆ.
ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಗ್ರೇಮ್ ಸ್ಮಿತ್ ಅಗ್ರ ಸ್ಥಾನದಲ್ಲಿದ್ದು, ಸ್ಮಿತ್ 109 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಈ ಪೈಕಿ 53 ಪಂದ್ಯಗಳಲ್ಲಿ ಆ ತಂಡ ಜಯ ಕಂಡಿದೆ. ಇನ್ನು ಆಸ್ಚ್ರೇಲಿಯಾದ ರಿಕ್ಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದು, ಪಾಟಿಂಗ್ 77 ಪಂದ್ಯಗಳ ಪೈಕಿ 48 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅದೇ ಆಸ್ಟ್ರೇಲಿಯಾ ತಂಡದ ಸ್ಟೀವ್ ವಾ 3ನೇ ಸ್ಥಾನದಲ್ಲಿದ್ದ ವಾ ನಾಯಕರಾಗಿದ್ದ 57 ಪಂದ್ಯಗಳ ಪೈಕಿ ಆಸಿಸ್ ಪಡೆ 41ರಲ್ಲಿ ಜಯ ಕಂಡಿದೆ.
ಲಾರ್ಡ್ಸ್ ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಭಾರತದ ಮೂರನೇ ನಾಯಕ
ಇದೇ ವೇಳೆ ಈ ಗೆಲುವಿನೊಂದಿಗೆ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದು, ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಭಾರತದ ಮೂರನೇ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ 1986ರಲ್ಲಿ ಕಪಿಲ್ ದೇವ್, 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಈ ಸಾಧನೆ ಗೈದಿದ್ದರು. ಈ ಪಟ್ಟಿಗೆ ಇದೀಗ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.
Related Article
2ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 151 ರನ್ ಗಳ ಭರ್ಜರಿ ಜಯ
ಕೆಣಕಿದ ಜಾಸ್ ಬಟ್ಲರ್ ಗೆ ಬೌಂಡರಿ ಮೂಲಕ ತಿರುಗೇಟು ನೀಡಿದ ಜಸ್ ಪ್ರೀತ್ ಬುಮ್ರಾ, ಮೈದಾನದಲ್ಲೇ ಆಟಗಾರರ ವಾಗ್ಯುದ್ಧ
2ನೇ ಟೆಸ್ಟ್: ಶಮಿ, ಬುಮ್ರಾ ಜೊತೆಯಾಟ, ಇಂಗ್ಲೆಂಡ್ ಗೆ 272 ರನ್ ಗುರಿ; 2 ವಿಕೆಟ್ ಪತನ, ಆಂಗ್ಲರಿಗೆ ಆರಂಭಿಕ ಆಘಾತ!
ಕೊಹ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿಲ್ಲ, ಅವರ ವಿಧಾನ ಸರಿ ಇಲ್ಲ, ಬದಲಾಗಬೇಕು: ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ