ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್, ಹಾಗೇ ಎದುರಾಳಿಯ ವಿಶ್ವಾಸವನ್ನು ಕುಗ್ಗಿಸುವ ಸಾಮರ್ಥ್ಯವೂ ಇದೆ: ಟಿಮ್ ಪೈನ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಸ್ಪರ್ಧಾತ್ಮಕತೆ ಮೂಲಕ ಎದುರಾಳಿಗಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಟಿಮ್ ಪೈನ್ ಹೇಳಿದ್ದಾರೆ.
ಟಿಮ್ ಪೈನ್-ಕೊಹ್ಲಿ
ಟಿಮ್ ಪೈನ್-ಕೊಹ್ಲಿ
Updated on

ಮೆಲ್ಬೋರ್ನ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಸ್ಪರ್ಧಾತ್ಮಕತೆ ಮೂಲಕ ಎದುರಾಳಿಗಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಟಿಮ್ ಪೈನ್ ಹೇಳಿದ್ದಾರೆ. 

2018-19ರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಕಾಂಗರೂ ನೆಲದಲ್ಲಿ ಟೆಸ್ಟ್ ಸರಣಿ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಸರಣಿ ಗೆಲುವಿನ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐತಿಹಾಸಿಕ ಸಾಧನೆ ಮಾಡಿದ್ದರೆ ಅಂದು ಆಸ್ಟ್ರೇಲಿಯಾ ನಾಯಕರಾಗಿದ್ದ ಟಿಮ್ ಪೇನ್ ಮುಖಭಂಗಕ್ಕೀಡಾಗಿದ್ದರು. 

ಕೊಹ್ಲಿ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೈದಾದನಲ್ಲಿ ಅತೀವವಾಗಿ ನಡೆದುಕೊಳ್ಳುವ ಮೂಲಕ ಎದುರಾಳಿ ಆಟಗಾರರ ವಿಶ್ವಾಸವನ್ನು ಕುಗ್ಗಿಸುತ್ತಾರೆ. ಇದನ್ನು ನಾನು ನಾಲ್ಕ ವರ್ಷಗಳ ಹಿಂದೆ ನೋಡಿದ್ದೇನೆ ಎಂದರು.

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದದ್ದು ವಿರಾಟ್ ಕೊಹ್ಲಿ. ಅಂದು ನಾವು ಎಷ್ಟೇ ಸಹನೆಯಿಂದಿದ್ದರೂ ಕೊಹ್ಲಿ ತಮ್ಮ ಅತಿಯಾಗಿ ಕಿರಿಕಿರಿ ಮಾಡುವ ಮೂಲಕ ಎದುರಾಳಿಯ ಸಹನೆಯನ್ನು ಕೆದಕುತ್ತಾರೆ. ಇದು ನಮ್ಮ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ. 2018-19ರಲ್ಲಿ ಭರ್ಜರಿ ಸರಣಿ ಸೋಲಿನ ನಂತರ ಪೈನ್ ಮತ್ತೊಂದು ಸೋಲನ್ನು ಅನುಭವಿಸಿದರು.

 2020ರಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಸರಣಿಯಿಂದ ಹೊರಬಂದಿದ್ದರು. ಈ ಹಿನ್ನೆಲೆಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಂಜಿಕ್ಯ ರಹಾನೆ ತಂಡಕ್ಕೆ 2-1ರ ಅಂತರದಿಂದ ಗೆಲುವು ತಂದುಕೊಟ್ಟಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com