ಟಿ-20 ವಿಶ್ವಕಪ್: ಅಂಪೈರ್ ಪಟ್ಟಿಯಲ್ಲಿ ಮೆನನ್, ರೆಫ್ರಿಯಾಗಿ ಜಾವಗಲ್ ಶ್ರೀನಾಥ್ ನೇಮಕ

ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ 20 ಅಂಪೈರ್ಸ್ ಮತ್ತು ರೆಫ್ರಿಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.
(ಬಡದಿಂದ) ಶ್ರೀನಾಥ್ ಮತ್ತಿತರ ಚಿತ್ರ
(ಬಡದಿಂದ) ಶ್ರೀನಾಥ್ ಮತ್ತಿತರ ಚಿತ್ರ
Updated on

ನವದೆಹಲಿ: ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ 20 ಅಂಪೈರ್ಸ್ ಮತ್ತು ರೆಫ್ರಿಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಇದರಲ್ಲಿ 16 ಅಂಪೈರ್ ಗಳು ಹಾಗೂ ನಾಲ್ವರು ರೆಫ್ರಿಗಳ ಹೆಸರು ಇವೆ. ನಾಲ್ವರು ರೆಫರಿಗಳ ಪೈಕಿ ಕನ್ನಡಿಗ ಜಾವಗಲ್ ಶ್ರೀನಾಥ್ ಕೂಡಾ ಸ್ಥಾನ ಪಡೆದಿದ್ದಾರೆ.

16 ಅಂಪೈರ್ ಗಳಲ್ಲಿ ಭಾರತೀಯ ಅಂಪೈರ್ ನಿತಿನ್ ಮೆನನ್ ಅವರು ಸ್ಥಾನ ಪಡೆದಿದ್ದಾರೆ. ಈ ಮೂಲಕ 20 ಮಂದಿಯ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೂ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ.  

ಭಾರತದ ಅತ್ಯಂತ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರೆನಿಸಿರುವ ಶ್ರೀನಾಥ್ ಆಟಗಾರನಾಗಿ ನಿವೃತ್ತಿಯಾದ ನಂತರ ಮ್ಯಾಚ್ ರೆಫ್ರಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆಡುತ್ತಿದ್ದಾರೆ. 2006ರಿಂದ ಅವರು ಐಸಿಸಿಯ ಮ್ಯಾಚ್ ರೆಫ್ರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com