ಮೈಕಲ್ ಸ್ಲೇಟರ್
ಮೈಕಲ್ ಸ್ಲೇಟರ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ರನ್ನು ಬಂಧಿಸಿದ ಪೊಲೀಸರು, ಯಾಕೆ ಗೊತ್ತ?

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಅವರನ್ನು ಬಂಧಿಸಲಾಗಿದೆ. 
Published on

ಸಿಡ್ನಿ: ಕೌಟುಂಬಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲಾಟರ್ ಅವರನ್ನು ಬಂಧಿಸಲಾಗಿದೆ.

ಸಿಡ್ನಿಯ ಮ್ಯಾನ್ಲಿಯಲ್ಲಿರುವ ನಿವಾಸದಲ್ಲಿ ಸ್ಲಾಟರ್‌ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಾರದ ಹಿಂದೆ ನಡೆದ ಘಟನೆಯ ಆಧಾರದ ಮೇಲೆ ಸಲ್ಲಿಸಲಾದ ದೂರಿನ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ... "ಅಕ್ಟೋಬರ್ 12 ರಂದು ... ಕೌಟುಂಬಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಪೂರ್ವ ಉಪ ನಗರ ಪೊಲೀಸರು ತನಿಖೆ ಆರಂಭಿಸಿ, ಅದರ ಆಧಾರದ ಮೇಲೆ ಬುಧವಾರ ಬೆಳಗ್ಗೆ 9:20 ಕ್ಕೆ ಆತನನ್ನು ಬಂಧಿಸಲಾಗಿದೆ ಎಂಬ ಹೇಳಿಕೆ ಬಿಡುಗಡೆಗೊಳಿಸಲಾಗಿದೆ. ಆದರೆ ಘಟನೆಗೆ ಸಂಬಂಧಿಸಿದ ಪೂರ್ಣ ವಿವರಗಳು ಲಭ್ಯವಾಗಬೇಕಿದೆ.

ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಮೈಕೆಲ್ ಸ್ಲಾಟರ್ ಟೆಸ್ಟ್ ಬ್ಯಾಟಿಂಗ್ ಅಗ್ರ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದರು. ಸ್ಲಾಟರ್ ಅವರ ವೃತ್ತಿಜೀವನದಲ್ಲಿ ಒಟ್ಟು 5,312 ರನ್ ಗಳಿಸಿದ್ದರು. 2004 ರಲ್ಲಿ ಅವರು ಕ್ರಿಕೆಟ್‌ ಗೆ ವಿದಾಯ ಹೇಳಿದ್ದರು. ನಂತರ ಪ್ರಸಾರಕ, ವಿಕ್ಷಕ ವಿವರಣೆ ತಜ್ಞರಾಗಿ ಗುರುತಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com