ಭಾರತ ತಂಡ
ಭಾರತ ತಂಡ

ಟಿ20 ವಿಶ್ವಕಪ್: ಅದ್ಭುತ ನಡೆಯದ ಹೊರತು ಸೆಮೀಸ್ ಗೆ ಭಾರತ ಡೌಟ್.. ಹೇಗೆ? ಇಲ್ಲಿದೆ ಮಾಹಿತಿ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಾನಾಡಿದ ಎರಡೂ ಪ್ರಮುಖ ಪಂದ್ಯಗಳಲ್ಲಿ ಸೋಲುವ ಮೂಲಕ ಭಾರತ ತೀವ್ರ ಮುಖಭಂಗ ಅನುಭವಿಸಿದ್ದು ಮಾತ್ರವಲ್ಲದೇ ಬಹುತೇಕ ಟೂರ್ನಿಯಿಂದಲೇ ಔಟ್ ಆಗಿದೆ.

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಾನಾಡಿದ ಎರಡೂ ಪ್ರಮುಖ ಪಂದ್ಯಗಳಲ್ಲಿ ಸೋಲುವ ಮೂಲಕ ಭಾರತ ತೀವ್ರ ಮುಖಭಂಗ ಅನುಭವಿಸಿದ್ದು ಮಾತ್ರವಲ್ಲದೇ ಬಹುತೇಕ ಟೂರ್ನಿಯಿಂದಲೇ ಔಟ್ ಆಗಿದೆ.

ಪಾಕಿಸ್ತಾನದ ವಿರುದ್ಧದ ಸೋಲಿನ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ನಿರ್ಣಾಯಕವಾಗಿತ್ತು. ಮಾಡು ಇಲ್ಲವೇ ಮಡಿ ಎಂಬಂತಾಗಿದ್ದ ಪಂದ್ಯದಲ್ಲಿ ಭಾರತ ತಂಡ ಎಲ್ಲ ವಿಭಾಗದಲ್ಲೂ ಸಂಪೂರ್ಣ ವಿಫಲವಾಗಿ ಪಂದ್ಯ ಕೈಚೆಲ್ಲಿ ನಿಂತಿದೆ. ಆ ಮೂಲಕ ಬಹುತೇಕ ಟೂರ್ನಿಯಿಂದಲೇ ಹೊರದಬ್ಬಲ್ಪಡುವ ಸ್ಥಿತಿಯಲ್ಲಿ ಭಾರತ ತಂಡವಿದೆ. ಇಂತಹ ಸ್ಥಿತಿಯಲ್ಲಿ ಭಾರತ ತಂಡ ಹೇಗೆ ಸೆಮೀಸ್ ಕುರಿತು ಲೆಕ್ಕಾಚಾರ ಹಾಕಬಹುದು...

ಮುಂದಿನ ಪಂದ್ಯಗಳಲ್ಲಿ ಗೆದ್ದರೆ...
ಭಾರತದ ಮುಂದಿನ ಪಂದ್ಯಗಳು ಆಫ್ಗಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ. ಈ ಮೂರು ತಂಡಗಳ ವಿರುದ್ಧ ಗೆದ್ದರೂ ಭಾರತ ಸೆಮೀಸ್ ಹಂತಕ್ಕೆ ಬರುವುದು ದೌಟ್.. ಈ ಮೂರು ಪಂದ್ಯಗಳಲ್ಲಿ ಭಾರತ ಉತ್ತಮ ರನ್ ರೇನ್ ನೊಂದಿಗೆ ಗೆಲ್ಲಬೇಕು...

ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ನ್ಯೂಜಿಲೆಂಡ್ ಅನ್ನು ಸೋಲಿಸಬೇಕು
ಕೇವಲ ಭಾರತ ತನ್ನ ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ ಸಾಲದು. ಬದಲಿಗೆ ನ್ಯೂಜಿಲೆಂಡ್ ತಾನು ಎದುರಿಸಲಿರುವ ಮುಂದಿನ 3 ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಸೋಲಬೇಕು. ಅಂದರೆ 2ನೇ ಸ್ಖಾನದಲ್ಲಿರುವ ಆಫ್ಘಾನಿಸ್ತಾನ ಮತ್ತು ಅಂತಿಮ ಸ್ಥಾನದಲ್ಲಿರುವ ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಸೋತರೆ ಆಗ ಭಾರತಕ್ಕೆ ಸೆಮೀಸ್ ಹಂತಕ್ಕೇರುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com